ಬ್ಯಾರಿಸ್ ಸೆಂಟ್ರಲ್ ಕಮಿಟಿಯಿಂದ ‘ಬ್ಯಾರಿಸ್ ಕೇರ್’ಗೆ ಚಾಲನೆ

ಸಾಂದರ್ಭಿಕ ಚಿತ್ರ | PC : magnific
ಬೆಂಗಳೂರು : ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಅಧೀನದಲ್ಲಿ ಕಾರ್ಯಾಚರಿಸುವ ಆರೋಗ್ಯ ಸೇವಾ ತಂಡವು ‘ಬ್ಯಾರಿಸ್ ಕೇರ್’ ಎಂಬ ಹೆಸರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಿದ್ದೇವೆ. ಸಮಾಜಸೇವೆಯನ್ನೇ ಉಸಿರಾಗಿಸಿರುವ ಉತ್ಸಾಹಿ ಯುವ ಜನರು ಇದರ ಭಾಗವಾಗಿ ಸಹಕರಿಸುವ ಸುವರ್ಣ ಅವಕಾಶವಿದೆ ಎಂದು ಬಿಸಿಸಿ ಕಾರ್ಯದರ್ಶಿ ಕಲಂದರ್ ಕೊಯ್ಲಾ ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಬೆಂಗಳೂರನ್ನು ಕೇಂದ್ರವಾಗಿಸಿ ಕೆಲಸಮಾಡುವ ಆರೋಗ್ಯ ಸೇವಾ ತಂಡದ ಸದಸ್ಯರಾಗಲು ಆಸಕ್ತರಿರುವ ಬಿಸಿಸಿ ಸದಸ್ಯರು ಮತ್ತು ಬೆಂಗಳೂರಿನ ಬ್ಯಾರಿ ಸಹೋದರರು ಈ ಲಿಂಕ್ (https://forms.gle/kLgdCwQhqhwJhg379) ಮೂಲಕ ಹೆಸರನ್ನು ನೊಂದಾಯಿಸಿಕೊಳ್ಳಿ ಎಂದು ಕೋರಿದ್ದಾರೆ.
ಈ ತಂಡ ಯಾವ ಸಂದರ್ಭಕ್ಕೂ ರಕ್ತದಾನಕ್ಕೆ ಸನ್ನದ್ದರಿರುವ ಹಾಗೂ ಪ್ರವಾಹ, ಭೂ ಕುಸಿತ ಸೇರಿದಂತೆ ಇನ್ನಿತರ ಪ್ರಾಕೃತಿಕ ವಿಕೋಪ ಸಂದರ್ಭದ ಸೇವೆಗೆ, ಅಪಘಾತದಂತಹ ದುರಂತಗಳ ಸಂದರ್ಭದಲ್ಲಿ ನೆರವಾಗುವ ಮತ್ತು ಆರೋಗ್ಯ ರಂಗದಲ್ಲಿ ಸೇವೆ ಮಾಡಲು ಆಸಕ್ತಿ ಇರುವ ಸಮಾಜ ಸೇವೆಯನ್ನೇ ಉಸಿರಾಗಿಸಿರುವ ತಂಡವಾಗಿರುತ್ತದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಮತ್ತು ಒತ್ತಡದಲ್ಲಿ ಕೆಲಸ ಮಾಡುವ ತಂಡ ಇದಾಗಿರಲಿದೆ. ಈ ತಂಡದಲ್ಲಿ ಬ್ಯಾರಿ ವೈದ್ಯರು ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೂ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ತಂಡದ ಅಧೀನದಲ್ಲಿ ಆ್ಯಂಬುಲೆನ್ಸ್ ಸೇವೆ ಹಾಗು ನಮ್ಮ ಬ್ಯಾರಿ ವೈದ್ಯರು, ಆರೋಗ್ಯ ಸೇವೆಯಲ್ಲಿ ತೊಡಗಿಸಿರುವ ಸ್ವಯಂ ಸೇವಾ ಸಂಸ್ಥೆಗಳು ಸಹ ಭಾಗವಾಗಲಿದ್ದಾರೆ ಎಂದು ಕಲಂದರ್ ಕೊಯ್ಲಾ ತಿಳಿಸಿದ್ದಾರೆ.






