‘ಬಹುತ್ವದ ಭಾರತ: ಸವಾಲುಗಳು ಮತ್ತು ಮುಂದಿನ ದಾರಿ’ ದುಂಡು ಮೇಜಿನ ಸಭೆ

ಬೆಂಗಳೂರು : ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದ್ದಾರೆ ಎಂದು ಫೋರಮ್ ಫಾರ್ ಡೆಮಾಕ್ರಸಿ ಆ್ಯಂಡ್ ಕಮ್ಯುನಲ್ ಅಮಿಟಿಯ ಪ್ರದಾನ ಕಾರ್ಯದರ್ಶಿ ಪ್ರೊ.ಮುಹಮ್ಮದ್ ಸಲೀಂ ಇಂಜಿನಿಯರ್ ತಿಳಿಸಿದ್ದಾರೆ.
ಶನಿವಾರ ನಗರದ ದಾರುಸ್ಸಲಾಮ್ ಕಟ್ಟಡದಲ್ಲಿರುವ ಬಿಐಎಫ್ಟಿ ಸಭಾಂಗಣದಲ್ಲಿ ಫೋರಮ್ ಫಾರ್ ಡೆಮಾಕ್ರಸಿ ಆ್ಯಂಡ್ ಕಮ್ಯುನಲ್ ಅಮಿಟಿ ವತಿಯಿಂದ ಆಯೋಜಿಸಿದ್ದ ‘ಬಹುತ್ವದ ಭಾರತ: ಸವಾಲುಗಳು ಮತ್ತು ಮುಂದಿನ ದಾರಿ’ ಕುರಿತ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವವರು, ತಮ್ಮ ನಡವಳಿಕೆಗಳು, ನಿರ್ಧಾರಗಳು ಮತ್ತು ನೀತಿಗಳ ಮೂಲಕ ಭಾರತದ ಪರಿಕಲ್ಪನೆಗೆ ತಾವು ವಿರುದ್ಧವಾಗಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ದುಂಡು ಮೇಜಿನ ಸಭೆಯಲ್ಲಿ ವಕೀಲ ವಿನಯ್ ಶ್ರೀನಿವಾಸ್, ಅಂಕಣಕಾರ ಶಿವಸುಂದರ್, ಭಾರತೀಯ ಸಮಾಜ ಸಂಸ್ಥೆಯ ನಿರ್ದೇಶಕ ಸೆಲ್ವರಾಜ್ ಅರುಳನಾಥನ್ ಎಸ್.ಜೆ, ಸಾಮಾಜಿಕ ಮಾನವಶಾಸ್ತ್ರಜ್ಞೆ ಡಾ.ಎ.ಆರ್.ವಾಸವಿ ಮತ್ತಿತರರು ಉಪಸ್ಥಿತರಿದ್ದರು.




