ಯುಜಿ ವೈದ್ಯಕೀಯ: ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಫಲಿತಾಂಶ ಪ್ರಕಟ

ಬೆಂಗಳೂರು : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ನಡೆಸಿದ ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಪ್ರಕಟಣೆ ನೀಡಿರುವ ಅವರು, ಸೀಟು ಹಂಚಿಕೆಯಾದವರು ನ.13ರೊಳಗೆ ಉಳಿಕೆ ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಂಡು ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ತಿಳಿಸಿದ್ದಾರೆ.
ಒಟ್ಟು 195 ಸೀಟು ಉಳಿದಿತ್ತು. ಇದರಲ್ಲಿ ರದ್ದುಪಡಿಸಿಕೊಂಡ ಹಾಗೂ ದಂತ ವೈದ್ಯಕೀಯದಿಂದ ವೈದ್ಯಕೀಯ ಕೋರ್ಸ್ಗೆ ಮೇಲ್ದರ್ಜೆಗೇರಿದ ಸೀಟುಗಳೂ ಸೇರಿವೆ. ಈ ಸುತ್ತಿನಲ್ಲಿ 148 ವೈದ್ಯಕೀಯ ಹಾಗೂ 21 ದಂತ ವೈದ್ಯಕೀಯ ಸೀಟು ಹಂಚಿಕೆಯಾಗಿವೆ. ಇನ್ನೂ 47 ವೈದ್ಯಕೀಯ ಸೀಟು ಹಂಚಿಕೆಯಾಗದೆ ಉಳಿದಿವೆ. ಇವುಗಳಲ್ಲಿ ಬೀದರ್ ಸರಕಾರಿ ವೈದ್ಯಕೀಯ ಕಾಲೇಜಿನ ಒಂದು ಹಾಗೂ ಬಾಗಲಕೋಟೆ ಸರಕಾರಿ ವೈದ್ಯಕೀಯ ಕಾಲೇಜಿನ 14 ಮ್ಯಾನೇಜ್ಮೆಂಟ್ ಸೀಟು ಕೂಡ ಸೇರಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಿಇಎಸ್ ವೈದ್ಯಕೀಯ ಕಾಲೇಜಿನ 25 ಸೀಟು ಉಳಿದಿವೆ. ದಂತ ವೈದ್ಯಕೀಯ ಕೋರ್ಸ್ನಲ್ಲಿ ಯಾವೊಂದೂ ಸೀಟು ಉಳಿದಿಲ್ಲ ಎಂದು ಎಚ್.ಪ್ರಸನ್ನ ತಿಳಿಸಿದ್ದಾರೆ.




