ಹಜ್ ಯಾತ್ರೆ-2024 | ರಾಜ್ಯದ ಯಾತ್ರಿಗಳ ಪ್ರಯಾಣ ಪ್ರಾರಂಭ

ಬೆಂಗಳೂರು : ರಾಜ್ಯ ಹಜ್ ಸಮಿತಿ ವತಿಯಿಂದ ಪವಿತ್ರ ಹಜ್ ಯಾತ್ರೆಗೆ ಯಾತ್ರಿಗಳ ಪ್ರಯಾಣ ಗುರುವಾರದಿಂದ ಆರಂಭವಾಗಿದೆ. ಇಂದು ತಲಾ 285 ಯಾತ್ರಿಗಳನ್ನು ಒಳಗೊಂಡ ಎರಡು ವಿಮಾನಗಳು ಸೌದಿ ಅರೇಬಿಯಾದ ಜಿದ್ದಾ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದವು.
ಬೆಂಗಳೂರಿನ ಹಜ್ ಭವನದಲ್ಲಿ ಯಾತ್ರಿಗಳಿಗೆ ಊಟ, ವಸತಿ ಸಹಿತ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹಜ್ ಭವನದಿಂದ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಹಜ್ ಟರ್ಮಿನಲ್‍ಗೆ ಕರೆದುಕೊಂಡು ಹೋಗಲು ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.
Next Story





