ಪ್ರೆಸ್‍ಕ್ಲಬ್‍ನ ದಸರಾ ಕಪ್-2025 | ಬ್ಯಾಡ್ಮಿಂಟನ್ ಟೂರ್ನಿಗೆ ಸಚಿವ ರಹೀಂ ಖಾನ್ ಚಾಲನೆ

ಬೆಂಗಳೂರು, ಸೆ. 19: ಪೇಸ್ ಸ್ಪೋರ್ಟ್ಸ್ ಅರೆನಾ ಅಕಾಡೆಮಿ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಎರಡು ದಿನಗಳ ಕಾಲ ದಸರಾ ಕಪ್-2025 ಬ್ಯಾಡ್ಮಿಂಟನ್ ಟೂರ್ನಿಗೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಚಾಲನೆ ನೀಡಿದರು.
ಶುಕ್ರವಾರ ಇಲ್ಲಿನ ದೀಪಾಂಜಲಿ ನಗರದ ಪ್ರಮೋದ್ ಲೇಔಟ್‍ನಲ್ಲಿರುವ ಪೇಸ್ ಸ್ಪೋರ್ಟ್ಸ್ ಅರೆನಾ ಅಕಾಡೆಮಿಯ ಬ್ಯಾಡ್ಮಿಂಟನ್ ಕೋರ್ಟ್‍ನಲ್ಲಿ ಬ್ಯಾಡ್ಮಿಂಟನ್ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಮಾಧ್ಯಮ ಮತ್ತು ಹಲವು ಸಿನೆಮಾ ರಂಗದ ಪ್ರಮುಖರು ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾರೆ.
ಸಿಂಗಲ್ಸ್, ಡಬಲ್ಸ್, ಮಿಶ್ರ ಡಬಲ್ಸ್ ನಲ್ಲಿ ಮೊದಲ ಹಂತದ ಪಂದ್ಯಗಳು ನಡೆದಿದ್ದು, ಸೆ.20ರಂದು ಅಂತಿಮ ಹಂತದ ಪಂದ್ಯಗಳು ನಡೆಯಲಿವೆ. ಅಂದು ಸಂಜೆ ಪ್ರೆಸ್‍ಕ್ಲಬ್‍ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕ್ರೀಡಾ ಸಮಿತಿ ಅಧ್ಯಕ್ಷ ಮಂಜುನಾಥ್, ಖಜಾಂಚಿ ಶರಣಬಸಪ್ಪ ಪಾಲ್ಗೊಂಡಿದ್ದರು.
Next Story





