ಮಹಿಳಾ ದಿನಾಚರಣೆ ಪ್ರಯುಕ್ತ ‘ನಾರಿ ಶಕ್ತಿ ರೈಡ್ 2026’

ಬೆಂಗಳೂರು : ಅಂತರ್‍ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಿ ಫಾರ್ ಸೊಸೈಟಿ ಸಂಸ್ಥೆ, ಮದರ್‌ಹುಡ್ ಆಸ್ಪತ್ರೆ, ಸಹಯೋಗದೊಂದಿಗೆ ರವಿವಾರ ನಗರದಲ್ಲಿ ನಾರಿ ಶಕ್ತಿ ರೈಡ್ 2026 ನಡೆಸಲಾಯಿತು.
ಬೆಳಗ್ಗೆ ಹೆಬ್ಬಾಳ ಫ್ಲೈಓವರ್ ಕೆಳಭಾಗದಲ್ಲಿರುವ ಮದರ್ ಹುಡ್ ಆಸ್ಪತ್ರೆ, ಸಹಕಾರನಗರದಿಂದ ಆರಂಭವಾದ ಈ ನಾರಿ ಶಕ್ತಿ ರೈಡ್‍ನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಅದ್ಧೂರಿಯಾಗಿ ಆರಂಭಿಸಿದರು. ಬಳಿಕ ಈ ರ್ಯಾಲಿ ನಗರದ ವಿವಿಧ ರಸ್ತೆಗಳ ಮೂಲಕ ಸಾಗುತ್ತಾ ಮಾಕ್ಸಿ ಬೆಂಗಳೂರು ಏರ್ ಪೋರ್ಟ್, ಪ್ರೆಸ್ಟೀಜ್ ಟೆಕ್ ಕ್ಲೌಡ್, ನವರತ್ನ ಅಗ್ರಹಾರದಲ್ಲಿ ಸಮಾರೋಪಗೊಂಡಿತು.
ಈ ರೈಡ್‍ನಲ್ಲಿ ಸುಮಾರು 50 ಮಹಿಳಾ ಬೈಕರ್ಸ್, ತಾಲಿರು ಫೌಂಡೇಶನ್‍ನ 20 ಮಹಿಳಾ ಆಟೋ ಚಾಲಕರು, 20 ಮಹಿಳಾ ಕಾರ್ ಚಾಲಕರು, ವೈದ್ಯರು, ವೃತ್ತಿಪರರು ಹಾಗೂ ಸೈಬರ್ ಸುರಕ್ಷತಾ ತಜ್ಞರು ಉತ್ಸಾಹದಿಂದ ಭಾಗವಹಿಸಿದ್ದರು.
Next Story





