‘ಆರೆಸ್ಸೆಸ್ ಕಚೇರಿಗೆ ಹೋಗಿ ಬಸವವಾಣಿಯ ಘೋಷಣೆ ಕೂಗಲಿ’ : ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು, ಸೆ. 14: ‘ಬಸವಣ್ಣನವರನ್ನು ಮೋದಿಯವರಿಗೆ ಹೋಲಿಕೆ ಮಾಡುವ ರಾಜ್ಯ ಬಿಜೆಪಿ ನಾಯಕರು ಬಸವಣ್ಣನವರ ತತ್ವವನ್ನು ಮನಸ್ಪೂರ್ವಕವಾಗಿ ಒಪ್ಪುತ್ತಾರೆಯೇ?. ಒಪ್ಪುತ್ತಾರೆ ಎಂದಾದರೆ, ಬಿಜೆಪಿ ನಾಯಕರು ಆರೆಸ್ಸೆಸ್ ಕಚೇರಿಗೆ ಹೋಗಿ ‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ’ ಎಂಬ ಬಸವವಾಣಿಯ ಘೋಷಣೆ ಕೂಗಲಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಸವಾಲು ಹಾಕಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕ್ ಖರ್ಗೆ, ಜಗಜ್ಯೋತಿ ಬಸವಣ್ಣನವರನ್ನು ಈ ಪರಿ ಅವಮಾನಿಸಿರುವ ಗೋವಿಂದ ಕಾರಜೋಳರವರು ಕನ್ನಡಿಗರ ಕ್ಷಮೆ ಕೇಳಬೇಕು. ಮೋದಿಯವರು ಅಭಿನವ ಬಸವಣ್ಣ ಆಗುವುದಿರಲಿ, ಬಸವಣ್ಣನವರ ತತ್ವಗಳನ್ನಾದರೂ ಪಾಲಿಸಿದ್ದಾರೆಯೇ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
‘ಕಳಬೇಡ ಕೊಲಬೇಡ’ ಎಂದಿದ್ದರು ಬಸವಣ್ಣ. ಆದರೆ, ಇವರು ಮತಗಳ್ಳತನದಲ್ಲೇ ಬದುಕಿದ್ದಾರೆ. ನೋಟ್ ಬ್ಯಾನ್, ರೈತರ ಪ್ರತಿಭಟನೆ, ಮಣಿಪುರದಲ್ಲಿ ಸಾವಿರಾರು ಜೀವಹಾನಿಗೆ ಕಾರಣರಾಗಿದ್ದಾರೆ. ‘ತನ್ನ ಬಣ್ಣಿಸಬೇಡ, ಇದಿರು ಹಳಿಯಬೇಡ’ ಎಂದಿದ್ದರು ಬಸವಣ್ಣ. ಆದರೆ, ಇವರು ತಮ್ಮನ್ನು ದೇವದೂತ ಎಂದುಕೊಳ್ಳುತ್ತಾರೆ, ವಿಪಕ್ಷಗಳನ್ನು ನಿಂಧಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ‘ಹುಸಿಯ ನುಡಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ’ ಎಂದಿದ್ದಾರೆ ಬಸವಣ್ಣ. ಆದರೆ, ಇವರಿಗೆ ಸುಳ್ಳೆ ಮನೆದೇವರು, ದ್ವೇಷವೇ ಬಂಡವಾಳ’ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಜಗಜ್ಯೋತಿ ಬಸವಣ್ಣನವರನ್ನು ಈ ಪರಿ ಅವಮಾನಿಸಿರುವ ಶ್ರೀ ಗೋವಿಂದ ಕಾರಜೋಳರವರು ಕನ್ನಡಿಗರ ಕ್ಷಮೆ ಕೇಳಬೇಕು.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 13, 2025
ಮೋದಿಯವರು ಅಭಿನವ ಬಸವಣ್ಣ ಆಗುವುದಿರಲಿ, ಬಸವಣ್ಣನವರ ತತ್ವಗಳನ್ನಾದರೂ ಪಾಲಿಸಿದ್ದಾರೆಯೇ?
- ಕಳಬೇಡ ಕೊಲಬೇಡ ಎಂದಿದ್ದರು ಬಸವಣ್ಣ,
ಆದರೆ ಇವರು ಮತಗಳ್ಳತನದಲ್ಲೇ ಬದುಕಿದ್ದಾರೆ,
ನೋಟ್ ಬ್ಯಾನಿನಲ್ಲಿ, ರೈತರ ಪ್ರತಿಭಟನೆಯಲ್ಲಿ,… pic.twitter.com/V3R3FO2jZX







