ಮಡಿಕೇರಿ | ಪಿಕ್ ಅಪ್ ವಾಹನ ಪಲ್ಟಿ; ಚಾಲಕ, ಕಾರ್ಮಿಕರಿಗೆ ಗಾಯ

ಮಡಿಕೇರಿ : ಟಯರ್ ಸ್ಫೋಟಗೊಂಡು ಪಿಕ್ ಅಪ್ ವಾಹನ ಪಲ್ಟಿಯಾದ ಪರಿಣಾಮ ಚಾಲಕ ಹಾಗೂ ಕಾರ್ಮಿಕರು ಗಾಯಗೊಂಡಿರುವ ಘಟನೆ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಪಿಕ್ ಅಪ್ ವಾಹನ ಪಲ್ಟಿಯಾದ ಸಂದರ್ಭ ವಾಹನ ಚಾಲಕ ರವಿ ಎಂಬುವವರ ಸೊಂಟಕ್ಕೆ ತೀವ್ರ ಗಾಯಗಳಾಗಿದೆ. ಕಾರ್ಮಿಕ ಬಾಬು ಹಾಗೂ ಇನ್ನೋರ್ವ ಅಸ್ಸಾಂ ಮೂಲದ ಕಾರ್ಮಿಕನ ಕಾಲಿಗೂ ಗಾಯವಾಗಿದೆ. ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಗಾಯಾಳುಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ದೃಶ್ಯ ಸಮೀಪದ ಕಟ್ಟಡದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





