ಮಹರ್ಷಿ ವಾಲ್ಮೀಕಿ ಜಯಂತಿ: ಅ.26ಕ್ಕೆ ಸರಕಾರಿ ರಜೆ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಜಯಂತಿಗೆ ಅ.25ರ ರವಿವಾರದ ಬದಲಿಗೆ ಅ.26ರ ಸೋಮವಾರದಂದು ಸಾರ್ವತ್ರಿಕ ರಜೆಯನ್ನಾಗಿ ಘೋಷಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್.ಅವರು ಆದೇಶ ಹೊರಡಿಸಿದ್ದಾರೆ.
2026ರ ರಜಾದಿನಗಳ ಪಟ್ಟಿಯಲ್ಲಿ ಅ.25ರಂದು ರಜೆ ಘೋಷಣೆ ಮಾಡಲಾಗಿದೆ. ಇದೀಗ ಸದರಿ ರಜೆಯನ್ನು ‘ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881’ರ 25ನೆ ಸೆಕ್ಷನ್‍ನಲ್ಲಿರುವ ವಿವರಣೆ ಅನ್ವಯ ಸಾರ್ವತ್ರಿಕ ರಜೆಯನ್ನಾಗಿ ಘೋಷಣೆ ಮಾಡಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
Next Story




