ಕೆನರಾ ಬ್ಯಾಂಕ್ನ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ.33.19 ಬೆಳವಣಿಗೆ ದಾಖಲು

ಸಾಂದರ್ಭಿಕ ಚಿತ್ರ
ಬೆಂಗಳೂರು : ಪ್ರತಿಷ್ಠಿತ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕ್ 2025ರ ವಾರ್ಷಿಕ ಅವಧಿಯ ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿದ್ದು, ಬ್ಯಾಂಕ್ನ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ.33.19ರಷ್ಟು ಬೆಳವಣಿಗೆ ದಾಖಲಾಗಿದೆ.
ಬ್ಯಾಂಕ್ನ ಜಾಗತಿಕ ವ್ಯವಹಾರದಲ್ಲಿ ಶೇ.11.32ರಷ್ಟು ಬೆಳವಣಿಗೆಯೊಂದಿಗೆ 25,30,215 ಕೋಟಿ ರೂ. ತಲುಪಿದೆ. ಜಾಗತಿಕ ಠೇವಣಿಯಲ್ಲಿ ಶೇ.11.01ರಷ್ಟು ಬೆಳವಣಿಗೆಯೊಂದಿಗೆ 14,56,883 ಕೋಟಿ ರೂ. ತಲುಪಿದೆ. ಜಾಗತಿಕ ಮುಂಗಡದಲ್ಲಿ ಶೇ.11.74ರಷ್ಟು ಬೆಳವಣಿಗೆಯೊಂದಿಗೆ 10,73,332 ಕೋಟಿ ರೂ. ತಲುಪಿದೆ.
ರಿಟೇಲ್-ಕೃಷಿ-ಎಂಎಸ್ಎಂಇ ಕ್ಷೇತ್ರಗಳಿಗೆ ನೀಡಲಾದ ಸಾಲಗಳಲ್ಲಿ ಶೇ.13.23ರಷ್ಟು ಬೆಳವಣಿಗೆ ಕಂಡಿದೆ. ರಿಟೇಲ್ ಸಾಲಗಳಲ್ಲಿ ಶೇ.42.80ರಷ್ಟು ಬೆಳವಣಿಗೆಯಾಗಿದೆ. ಗೃಹ ಸಾಲಗಳಲ್ಲಿ ಶೇ.13.57ರಷ್ಟು ಬೆಳವಣಿಗೆ ಮತ್ತು ವಾಹನ ಸಾಲಗಳಲ್ಲಿ ಶೇ.19.63ರಷ್ಟು ಬೆಳವಣಿಗೆಯಾಗಿದೆ.
ಶುಲ್ಕ ಮೂಲ ಆದಾಯ ಶೇ.20.30ರಷ್ಟು ಬೆಳವಣಿಗೆಯೊಂದಿಗೆ 2,335 ಕೋಟಿ ರೂ. ತಲುಪಿದೆ. ಬ್ಯಾಂಕಿನ ನಿವ್ವಳ ಲಾಭ ಶೇ.33.19ರಷ್ಟು ಬೆಳವಣಿಗೆಯೊಂದಿಗೆ 5,004 ಕೋಟಿ ರೂ. ತಲುಪಿದೆ. ಪ್ರತಿ ಷೇರಿಗೆ ಗಳಿಕೆಯು ಶೇ.16.98ರಷ್ಟು ಹೆಚ್ಚಾಗಿದೆ.
ಕೆನರಾ ಬ್ಯಾಂಕ್ 2025ರ ಮಾರ್ಚ್ ಅಂತ್ಯಕ್ಕೆ ಒಟ್ಟು 9,849 ದೇಶೀಯ ಶಾಖೆಗಳನ್ನು ಹೊಂದಿದ್ದು, ಇವುಗಳಲ್ಲಿ 3,139 ಗ್ರಾಮೀಣ ಪ್ರದೇಶ, 2,900 ಅರೆ ನಗರ ಪ್ರದೇಶ, 1,944 ನಗರ ಪ್ರದೇಶ ಮತ್ತು 1,866 ಮಹಾನಗರ ಪ್ರದೇಶಗಳಲ್ಲಿ ಇವೆ. 4 ಅಂತಾರಾಷ್ಟ್ರೀಯ ಶಾಖೆಗಳನ್ನು ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.







