ಕೋಲಾರ -ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ಅಪಘಾತ; ಏಳು ವಿದ್ಯಾರ್ಥಿಗಳಿಗೆ ಗಾಯ

ಕೋಲಾರ : ಕೋಲಾರ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ 75ರ ಚಿಕ್ಕನಹಳ್ಳಿ ಗೇಟ್ ಸಮೀಪ ವೇಗವಾಗಿ ಬಂದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿ ನಿಲ್ಲಿಸಿದ ಲಾರಿಗೆ ಗುದ್ದಿ ಕಾರಿನಲ್ಲಿದ್ದ ಏಳು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಕೋಲಾರದಲ್ಲಿ ನರ್ಸಿಂಗ್ ಓದುತ್ತಿದ್ದ ಕೇರಳದ ಸೂರ್ಯಕಿರಣ್ (21), ಇಮ್ಯಾನ್ಯುಯಲ್ (21), ಡಿಯೋನ್ (21), ದೇವದಾಸ್ (21), ಆದರ್ಶ್ (21), ಸಿಯಾದ್ (21), ಕಾಶಿನಾಥ್ (21) ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಡಿಯೋನ್ ಮತ್ತು ಚಾಲಕ ಕಾಶಿನಾಥ್ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಹೊಸಕೋಟೆ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




