ಲೋಕಸಭಾ ಚುನಾವಣೆ ವೇಳೆ 4.8 ಕೋಟಿ ರೂ. ಜಪ್ತಿ ಪ್ರಕರಣ : ಸಂಸದ ಡಾ.ಕೆ.ಸುಧಾಕರ್ಗೆ ತಾತ್ಕಾಲಿಕ ರಿಲೀಫ್

ಹೈಕೋರ್ಟ್
ಬೆಂಗಳೂರು : ಲೋಕಸಭಾ ಚುನಾವಣೆ ವೇಳೆ 4.8 ಕೋಟಿ ರೂ. ದೊರೆತ ಆರೋಪಕ್ಕೆ ಸಂಬಂಧಿಸಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಹೈಕೋರ್ಟ್ ಆದೇಶಿಸಿದೆ.
ಎಫ್ಐಆರ್ ರದ್ದು ಕೋರಿ ಚಿಕ್ಕಬಳ್ಳಾಪುರ ಡಾ.ಕೆ.ಸುಧಾರಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಆದೇಶಿಸಿದೆ. ಲೋಕಸಭೆ ಚುನಾವಣಾ ವೇಳೆ ವೇಳೆ ಗೋವಿಂದಪ್ಪಎಂಬವರ ಮನೆಯಲ್ಲಿ 4.8 ಕೋಟಿ ರೂ. ಜಪ್ತಿ ಮಾಡಲಾಗಿತ್ತು. ಈ ವೇಳೆ ಚುನಾವಣಾ ಅಧಿಕಾರಿಯಾಗಿದ್ದ ಮುನೀಶ್ ಮೌದ್ಗಿಲ್ಗೆ ವಾಟ್ಸ್ಆ್ಯಪ್ ಕರೆ, ಮೆಸೇಜ್ ಮಾಡಿದ ಆರೋಪ ಕೆ.ಸುಧಾಕರ್ ಮೇಲಿತ್ತು. ಅಲ್ಲದೆ ಮತದಾರರಿಗೆ ಲಂಚ ನೀಡಲು ಮುಂದಾಗಿದ್ದ
ಬಗ್ಗೆ ದೂರು ದಾಖಲಾಗಿತ್ತು. ಪೊಲೀಸರು ಡಾ.ಕೆ.ಸುಧಾಕರ್, ಗೋವಿಂದಪ್ಪ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಹೀಗಾಗಿ ಪ್ರಕರಣ ರದ್ದು ಕೋರಿ ಹೈಕೋರ್ಟ್ಗೆ ಡಾ.ಕೆ.ಸುಧಾಕರ್ ಅರ್ಜಿ ಸಲ್ಲಿಸಿದ್ದರು.
Next Story





