ಕೇಂದ್ರ ಸಚಿವರೊಬ್ಬರು ನನ್ನ ವಿರುದ್ಧ ಈಡಿ ದಾಳಿ ನಡೆಸಲು ಒತ್ತಾಯಿಸುತ್ತಿದ್ದಾರೆ : ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಕೇಂದ್ರ ಸಚಿವರೊಬ್ಬರು ನನ್ನ ಸಂಪುಟ ಸಹೋದ್ಯೋಗಿಗಳ ವಿರುದ್ಧ ಮತ್ತು ನನ್ನ ವಿರುದ್ಧ ಐಟಿ ಮತ್ತು ಈಡಿ ದಾಳಿ ನಡೆಸುವಂತೆ ಮೋದಿ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂಬ ಸುದ್ದಿಯೊಂದು ದಿಲ್ಲಿಯ ಅಧಿಕಾರ ವಲಯದಿಂದ ಕೇಳಿಬರುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸೋಮವಾರ ಸಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕೆಪಿಎಸ್ಸಿ ತನಿಖೆಯನ್ನು ರಾಜಕೀಯ ಮರೆಮಾಚಲು ಈ ತಂತ್ರ ಬಳಸುತ್ತಿದ್ದಾರೆ. ‘ಆರೆಸ್ಸೆಸ್ನ ಡಿ ಗ್ರೂಪ್ ಹುದ್ದೆ’ಗೆ ನೂತನವಾಗಿ ನೇಮಕವಾದವರು ಕೆಪಿಎಸ್ಸಿ ನೇಮಕಾತಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರನ್ನು ಮತ್ತು ನನ್ನನ್ನು ಸಿಲುಕಿಸುವಂತೆ ಆರೋಪಿಗಳ ಮೇಲೆ ಒತ್ತಡ ಹೇರಲು ಈಡಿಯನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ ಎಂದಿದ್ದಾರೆ.
‘ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ’ ಗೌರವಾನ್ವಿತ ಸಚಿವರು ಏಕಾಂಗಿಯಾಗಿ ಎದುರಿಸಲು ಸಿದ್ಧರಿಲ್ಲದೆ. ಹತಾಶೆಯಲ್ಲಿ ತಮ್ಮದೇ ಆದ ಸಮ್ಮಿಶ್ರ ಪಾಲುದಾರರನ್ನು ತಮ್ಮೊಂದಿಗೆ ಎಳೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.






