Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ಮಧುಕರ ಶೆಟ್ಟಿ ಅವರನ್ನು ಸಮಾಜ ಸೂಕ್ತ...

ಮಧುಕರ ಶೆಟ್ಟಿ ಅವರನ್ನು ಸಮಾಜ ಸೂಕ್ತ ರೀತಿಯಲ್ಲಿ ಗುರುತಿಸಲಿಲ್ಲ : ಅಬ್ದುಲ್ ಅಹದ್

ವಾರ್ತಾಭಾರತಿವಾರ್ತಾಭಾರತಿ14 May 2026 8:48 PM IST
share
ಮಧುಕರ ಶೆಟ್ಟಿ ಅವರನ್ನು ಸಮಾಜ ಸೂಕ್ತ ರೀತಿಯಲ್ಲಿ ಗುರುತಿಸಲಿಲ್ಲ : ಅಬ್ದುಲ್ ಅಹದ್
‘ಆಕ್ಸಿಡೆಂಟ್’ ಕಿರುಚಿತ್ರ ಬಿಡುಗಡೆ, ‘ಖಾಕಿಯೊಳಗಿನ ಸಂತ ನಾಟಕ’ ಪ್ರದರ್ಶನ

ಬೆಂಗಳೂರು, ಮೇ 14 : ‘ಖಾಕಿಯೊಳಗಿನ ಸಂತ’ ನಾಟಕವು ಡಾ.ಕೆ.ಮಧುಕರ್ ಶೆಟ್ಟಿ ಎಂಬ ಸಜ್ಜನ ವ್ಯಕ್ತಿಯ ಜೀವನಾಧಾರಿತವಾಗಿದೆ. ಒಬ್ಬ ಮಹಾನ್ ವ್ಯಕ್ತಿಯ ಜೀವನಾಧಾರಿತ ನಾಟಕ ಕಲಾಲೋಕಕ್ಕೆ ಬಂದಿರುವುದು ಸಂತೋಷದ ಸಂಗತಿ. ಮಧುಕರ ಶೆಟ್ಟಿ ಅವರನ್ನು ಸಮಾಜ ಸೂಕ್ತ ರೀತಿಯಲ್ಲಿ ಗುರುತಿಸಲಿಲ್ಲ’ ಎಂದು ಡಿಐಜಿಪಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಭದ್ರತಾ-ಜಾಗೃತಿ ನಿರ್ದೇಶಕ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಗುರುವಾರ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾಂಸ್ಕೃತಿಕ ಕಲಾ ಕುಟೀರದ ವತಿಯಿಂದ ಆಯೋಜಿಸಿದ್ದ ‘ಆಕ್ಸಿಡೆಂಟ್’ ಕಿರುಚಿತ್ರ ಬಿಡುಗಡೆ ಹಾಗೂ ಡಾ.ಮಧುಕರ ಶೆಟ್ಟಿ ಅವರ ಜೀವನಗಾಥೆ ಕುರಿತ ‘ಖಾಕಿಯೊಳಗಿನ ಸಂತ ನಾಟಕ’ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಕೆ.ಮಧುಕರ್ ಶೆಟ್ಟಿ ಅವರು ಕೂಡ ತಮ್ಮನ್ನು ಗುರುತಿಸಬೇಕು ಎಂದೂ ಬಯಸಿರಲಿಲ್ಲ. ಆದರೆ ಇವತ್ತು ಮಧುಕರ್ ಶೆಟ್ಟಿ ಅವರ ಜೀವನದ ಕುರಿತ ನಾಟಕ ಬಂದಿರುವುದು ಶಾಶ್ವತವಾಗಿ ಮುಂದಿನ ಪೀಳಿಗೆಗೆ ಉಳಿಯುತ್ತದೆ. ಒಬ್ಬ ಪೊಲೀಸ್ ಅಧಿಕಾರಿಯಾಗಿ ಅವರ ತಮ್ಮ ಇತಿ-ಮಿತಿಗಳನ್ನು ಮೀರಿ ಬೆಳೆದವರು. ಅವರನ್ನು ಯಾರು ನೋಡಿದ್ದರೋ, ಯಾರು ಅವರ ಪ್ರಭಾವಕ್ಕೆ ಒಳಗಾಗಿದ್ದರೋ ಎಲ್ಲರಿಗೂ ಅವರ ಮನಸ್ಸಿನಲ್ಲಿ ಒಂದು ಛಾಪನ್ನು ಮೂಡಿಸಿದ್ದಾರೆ ಎಂದು ಅಬ್ದುಲ್ ಅಹದ್ ನುಡಿದರು.

ಹಿಂದೆ ಯಾರು ಸಮಾಜಕ್ಕಾಗಿ ದುಡಿದಿದ್ದಾರೋ, ಜನರಿಗಾಗಿ ಪ್ರಾಣ ಕೊಟ್ಟಿದ್ದಾರೋ, ಅಂತವರನ್ನು ಜನರು ಲಾವಣಿ, ಕಥೆ, ಜನಪದ ಕಥೆಗಳ ಮೂಲಕ ಜೀವಂತವಾಗಿಟ್ಟಿದ್ದಾರೆ. ಮಧುಕರ್ ಶೆಟ್ಟಿ ಅವರು ಮರಣ ಹೊಂದಿ ಸುಮಾರು ವರ್ಷಗಳೇ ಕಳೆದಿವೆ. ಆದರೆ ಇವತ್ತು ಅವರ ಜೀವನ ಆಧಾರಿತ ನಾಟಕದ ರೂಪದಲ್ಲಿ ಬರುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಅಬ್ದುಲ್ ಅಹದ್ ಮೆಚ್ಚುಗೆ ವ್ಯಕ್ತಪಡಿಸಿದರು.

ಖಾಕಿಯೊಳಗಿನ ಸಂತ ನಾಟಕ ಕನ್ನಡ ಭಾಷೆ, ಸಂಸ್ಕೃತಿ, ಮತ್ತು ಸಮಸ್ತ ಕನ್ನಡದ ಜನರಿಗೆ ದೊಡ್ಡ ಕೊಡುಗೆಯಾಗಿದೆ. ‘ಆಕ್ಸಿಡೆಂಟ್’ ಕಿರುಚಿತ್ರವು ಒಂದು ಕಲಾ ರೂಪಕವಾಗಿದೆ. ಅದರಲ್ಲಿ ಅಪಘಾತದಿಂದ ಯಾವ ರೀತಿ ಪರಿಣಾಮವಾಗುತ್ತದೆ ಎನ್ನುವುದನ್ನು ತಿಳಿಸಲಾಗಿದೆ ಎಂದು ಅಬ್ದುಲ್ ಅಹದ್ ಇದೇ ವೇಳೆ ತಿಳಿಸಿದರು.

ಖಾಕಿಯೊಳಗಿನ ಸಂತ ಹಾಗೂ ಆಕ್ಸಿಡೆಂಟ್ ಕಿರುಚಿತ್ರದ ಕಲಾವಿದರೆಲ್ಲರೂ ಬಿಎಂಟಿಸಿಯಲ್ಲಿ ಕೆಲಸ ಮಾಡುವ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳೇ ಆಗಿದ್ದಾರೆ. ಅವರ ಶ್ರದ್ಧೆ, ಪ್ರತಿಭೆ, ಸೃಜನಶೀಲತೆಯನ್ನು ನೋಡಿದರೆ, ಯಾವ ವೃತ್ತಿಪರ ಕಲಾವಿದರಿಗಿಂತಲೂ ಕಡಿಮೆ ಇಲ್ಲ ಎಂದು ಅಬ್ದುಲ್ ಅಹದ್ ಅಭಿಪ್ರಾಯಪಟ್ಟರು.

ಪ್ರಶಸ್ತಿಗಳು ಅಧಿಕಾರಿಗಳ ಮಿತ್ರರಿಗೆ ಸಿಗುತ್ತವೆ ಎಂದು ಹಿರಿಯ ಪತ್ರಕರ್ತ ಪಿ.ಲಂಕೇಶ್ ಅವರು ಒಂದು ಕಡೆ ಬರೆದಿರುವುದನ್ನು ನಾನು ಓದಿದ್ದೆ, ನಾನು ಅಂತಹ ಪ್ರಶಸ್ತಿ ಕೊಡಿಸುವ ಅಧಿಕಾರಿಯಲ್ಲ. ನಿಜವಾದ ಕಲೆ ಎಲ್ಲಿದೆ, ಅದನ್ನು ಕಂಡು ಪ್ರೋತ್ಸಾಹಿಸುತ್ತೇನೆ ಎಂದು ಅಬ್ದುಲ್ ಅಹದ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಮಂಜುನಾಥ್, ರಾಮಮೂರ್ತಿ, ‘ಆಕ್ಸಿಡೆಂಟ್’ ಕಿರುಚಿತ್ರದ ನಿರ್ದೇಶಕ ಆಂಥೋಣಿ ವಿಕ್ರಂ, ‘ಖಾಕಿಯೊಳಗಿನ ಸಂತ’ ನಾಟಕದ ನಿರ್ದೇಶಕ ಸಿದ್ದರಾಮ ಕೊಪ್ಪರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags

IPS officer Abdul Ahad
share
ವಾರ್ತಾಭಾರತಿ
ವಾರ್ತಾಭಾರತಿ
Next Story
X