ಬೆಂಗಳೂರು | ರಸ್ತೆ ತಿರುವಿನಲ್ಲಿ ಕಂಟೈನರ್ ಉರುಳಿಬಿದ್ದು ಇಬ್ಬರು ಮೃತ್ಯು, ನಾಲ್ವರಿಗೆ ಗಾಯ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕಂಟೈನರ್ ವಾಹನವೊಂದು ರಸ್ತೆ ತಿರುವಿನಲ್ಲಿ ಉರುಳಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರವಿವಾರ ವರದಿಯಾಗಿದೆ.
ಆಂಧ್ರಪ್ರದೇಶ ಮೂಲದ ಶ್ರೀಮಾನ್(25) ಮತ್ತು ಜಾರ್ಖಂಡ್ ಮೂಲದ ಶ್ರೀನಿವಾಸ್(28) ಮೃತರು ಎಂದು ಗುರುತಿಸಲಾಗಿದೆ. ಭಾರೀ ಗಾತ್ರದ ಯಂತ್ರಗಳನ್ನು ತುಂಬಿಕೊಂಡು ಅ.26ರ ರವಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾರೋಹಳ್ಳಿ-ಜಿಗಣಿ ರಸ್ತೆಯಲ್ಲಿ ಕಂಟೈನರ್ ಬರುತ್ತಿದ್ದಾಗ ಉರುಗನದೊಡ್ಡಿ ಸಮೀಪ ರಸ್ತೆ ತಿರುವಿನಲ್ಲಿ ಉರುಳಿ ಬಿದ್ದಿದೆ ಎನ್ನಲಾಗಿದೆ.
ಈ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆನೇಕಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಾಹಿತಿ ತಿಳಿದ ಜಿಗಣಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
Next Story





