ಬೆಂಗಳೂರು | ಮೋರಿಗೆ ಕಾರು ಬಿದ್ದು ಇಬ್ಬರ ಸಾವು

ಸಾಂದರ್ಭಿಕ ಚಿತ್ರ
ಬೆಂಗಳೂರು : ವೇಗವಾಗಿ ಹೋಗುತ್ತಿದ್ದ ಕಾರು ಮೋರಿಗೆ ಬಿದ್ದು ಮೂವರು ಸ್ನೇಹಿತರಲ್ಲಿ ಇಬ್ಬರು ಮೃತಪಟ್ಟು, ಓರ್ವ ಗಾಯಗೊಂಡಿರುವ ದಾರುಣ ಘಟನೆ ಇಲ್ಲಿನ ಚಿಕ್ಕಜಾಲದ ಸಾದಹಳ್ಳಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಪಿಳ್ಳಪ್ಪ ಗಾರ್ಡನ್ನ ಶಾಹಿದ್(22) ಜೆ.ಸಿ. ನಗರದ ನಿವಾಸಿ ಸೈಯದ್ ಅಬ್ದುಲ್ ರೆಹಮಾನ್(24) ಮೃತಪಟ್ಟವರು, ಗಾಯಗೊಂಡಿರುವ ಸೈಯದ್ ಮುಜಾಹಿದ್ದಿನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
ಮೂವರು ಊಟಮುಗಿಸಿಕೊಂಡು ತಡರಾತ್ರಿ ಮನೆಗೆ ಅತಿ ವೇಗವಾಗಿ ಕಾರಿನಲ್ಲಿ ಹೋಗುತ್ತಿದ್ದಾಗ ಮೋರಿಗೆ ಬಿದ್ದು ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ಮತ್ತೋರ್ವ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಚಿಕ್ಕಜಾಲ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Next Story





