ಆನೇಕಲ್ ಬಳಿ ಬಸ್ಸನ್ನು ಕದಿಯಲು ಪ್ರಯತ್ನಿಸಿ ಅನಾಹುತ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಕಳ್ಳರು ಬಸ್ ಕದಿಯಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ಬಸ್ ಅಪಘಾತವಾಗಿರುವ ಘಟನೆ ಶನಿವಾರ ರಾತ್ರಿ ನಗರದ ಹೊರ ವಲಯದಲ್ಲಿರುವ ಆನೇಕಲ್ನಲ್ಲಿ ನಡೆದಿದೆ. ಘಟನೆಯಲ್ಲಿ ಬಸ್ ಮುಂಭಾಗ ಜಖಂಗೊಂಡಿದೆ.
ಪ್ರಕರಣ ಸಂಬಂಧ ಸಾರ್ವಜನಿಕರು ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂವರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾತ್ರಿ ವೇಳೆ ಜನ ಸಂಚಾರ ಕಡಿಮೆ ಇದ್ದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ.
ಎಂದಿನಂತೆ ಆನೇಕಲ್ನ ಥಳಿ ರಸ್ತೆ ಬದಿ ಬಸ್ ಪಾರ್ಕ್ ಮಾಡಿ ಚಾಲಕ ಹೋಗಿದ್ದು, ಈ ವೇಳೆ ಕುಡಿದ ಮತ್ತಿನಲ್ಲಿ ಬಂದ ನಾಲ್ವರು ಬಸ್ಸಿನ ವೈರ್ ಕಟ್ ಮಾಡಿ ಕದ್ದು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ನಿಯಂತ್ರಣ ಕಳೆದುಕೊಂಡ ಬಸ್ ಎರಡು ವಿದ್ಯುತ್ ಕಂಬಗಳಿಗೆ ಗುದ್ದಿದೆ. ಕೂಡಲೇ ಸಾರ್ವಜನಿಕರು ಬಸ್ ತಡೆದು ನಿಲ್ಲಿಸಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
Next Story





