Anekal | ಕಾರ್ಖಾನೆಯ ಬಾಯ್ಲರ್ ಶುಚಿಗೊಳಿಸುವ ವೇಳೆ ಇಬ್ಬರು ಕಾರ್ಮಿಕರ ಮೃತ್ಯು; ಮತ್ತಿಬ್ಬರ ಸ್ಥಿತಿ ಗಂಭೀರ

ಆನೇಕಲ್ : ಕೆಮಿಕಲ್ ಯುಕ್ತ ಬಾಯ್ಲರ್ ಶುಚಿಗೊಳಿಸುವ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ಕೆಮಿಕಲ್ ರಿಯಾಕ್ಷನ್ ಆಗಿ ಮೃತಪಟ್ಟಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಗಣಿ ಕೈಗಾರಿಕಾ ಪ್ರದೇಶದ ಕುಮಾರ್ ಆರ್ಗ್ಯಾನಿಕ್ಸ್ ಕಾರ್ಖಾನೆಯಲ್ಲಿ ಸಂಭವಿಸಿದೆ.
ಉತ್ತರ ಪ್ರದೇಶ ಮೂಲದ ಕಾರ್ಮಿಕರಾದ ಮುನ್ನಾ ಸಿಂಗ್ ಹಾಗೂ ಲಾಲು ಸಿಂಗ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸುಮಿತ್ ಮಂಡಲ್ ಹಾಗೂ ವಿಜಯ ಕುಮಾರ್ ಸಿಂಗ್ ಗಂಭೀರ ಗಾಯಗೊಂಡ ಕಾರ್ಮಿಕರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಡಿವೈಎಸ್ಪಿ ಗೋಪಾಲ್ ನಾಯಕ್ ಹಾಗೂ ಜಿಗಣಿ ಇನ್‌ಸ್ಪೆಕ್ಟರ್ ನವೀನ್ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಆಸ್ಪತ್ರೆ ಹಾಗೂ ಕಾರ್ಖಾನೆಯ ಸುತ್ತ ಜನರು ಜಮಾಯಿಸಿ ಕಾರ್ಖಾನೆ ಮಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಖಾನೆಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ
Next Story




