ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ: ಕೊರೆವ ಚಳಿ ಲೆಕ್ಕಿಸದೆ ರಸ್ತೆ ಬದಿಯ ಟೆಂಟ್ ಗಳಲ್ಲಿ ಕಳೆದ ಧರಣಿನಿರತರು

ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ಮಂಗಳವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿರುವ ಆಶಾ ಕಾರ್ಯಕರ್ತೆಯರು ರಾತ್ರಿ ವೇಳೆ ಓಪನ್ ಟೆಂಟ್ ಹಾಗೂ ರಸ್ತೆಯ ಬಯಲಿನಲ್ಲಿ ಮಲಗಿದರು.
ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಫ್ರೀಡಂ ಪಾರ್ಕ್ ಗೆ ಆಗಮಿಸಿರುವ ಸಾವಿರಾರು ಆಶಾ ಕಾರ್ಯಕರ್ತೆಯರು ಮಂಗಳವಾರ ಹಗಲಿಡೀ ಬಿರುಬಿಸಿಲಿನಲ್ಲಿ ಹೋರಾಟ ನಡೆಸಿದರೆ, ರಾತ್ರಿ ವೇಳೆ ಕೊರೆವ ಚಳಿಯಲ್ಲಿ ರಸ್ತೆ ಬದಿಯಲ್ಲೇ ಕಳೆದರು.
ಬುಧವಾರ ಬೆಳಗ್ಗೆಯಿಂದ ಧರಣಿ ಮುಂದುವರಿದಿದೆ.
Next Story






