ಚಿಕ್ಕ ಮಕ್ಕಳಂತೆ ಮಂತ್ರಿ ಮಾಡುವಂತೆ ಕೇಳುವುದಿಲ್ಲ: ಅಶೋಕ್ ಪಟ್ಟಣ

ಬೆಂಗಳೂರು : ನಾನು ಪದೇ ಪದೇ ಚಿಕ್ಕ ಮಕ್ಕಳಂತೆ ಮಂತ್ರಿ ಮಾಡುವಂತೆ ಕೇಳುವುದಿಲ್ಲ. ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿಯ ಹಿಂದೆ ಬೀಳಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಅಶೋಕ್ ಪಟ್ಟಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಎಷ್ಟು ಕೆಲಸ ಮಾಡಿದ್ದೇವೆ?, ಎಷ್ಟು ನಿಷ್ಠಾವಂತರು ಎಂಬುದು ಮುಖ್ಯಮಂತ್ರಿಗಳಿಗೆ. ಬೆಳಗಾವಿ ಜಿಲ್ಲೆಗೆ 3 ಸಚಿವ ಸ್ಥಾನ ಕೇಳಿದ್ದೇವೆ. ಆದರೆ, ಮಂತ್ರಿ ಮಾಡುವಂತೆ ನಾನು ಹಿಂದೆ ಹೋಗುವುದಿಲ್ಲ. ನಮಗೂ ಗೌರವ ಮತ್ತು ಸ್ವಾಭಿಮಾನವಿದೆ. ಸಚಿವ ಸ್ಥಾನಕ್ಕಿಂತಲೂ ಸ್ವಾಭಿಮಾನ ದೊಡ್ಡದು ಎಂದು ತಿಳಿಸಿದರು.
ನನ್ನ ರಾಜಕೀಯ ನಿವೃತ್ತಿ ಎಲ್ಲವೂ ಊಹಾಪೋಹಗಳು. ನಾನು ಮುಂದಿನ ಚುನಾವಣೆಗೆ ಸಿದ್ಧವಾಗುತ್ತಿದ್ದೇನೆ. ಮುಂದಿನ ಬಾರಿ 25 ಸಾವಿರ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ. ನನ್ನ ಉಸಿರಿರುವವರೆಗೂ ರಾಜಕಾರಣ ಮಾಡುತ್ತೇನೆ. ನನ್ನ ಆರೋಗ್ಯ ಕೈ ಕೊಟ್ಟರೆ, ಮುಂದಿನ ಪೀಳಿಗೆಗೆ ನೋಡೋಣ ಎಂದರು.
Next Story




