ಬೆಂಗಳೂರು | ಇಬ್ಬರು ಹೆಣ್ಣುಮಕ್ಕಳನ್ನು ಭೀಕರವಾಗಿ ಹತ್ಯೆಗೈದ ಮಲತಂದೆ

ಬೆಂಗಳೂರು : ನಗರದ ದಾಸರಹಳ್ಳಿಯಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ಮಲತಂದೆಯೇ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ.
ಕುಟುಂಬವು ಉತ್ತರ ಭಾರತ ಮೂಲದವರಾಗಿದ್ದು, ದಾಸರಹಳ್ಳಿಯ ಕಾವೇರಿ ಬಡಾವಣೆಯೊಂದರ ಮನೆಯಲ್ಲಿ ವಾಸವಿದ್ದರು. ಸುಮಾರು 14 ಹಾಗೂ 15 ವರ್ಷದ ಹೆಣ್ಣು ಮಕ್ಕಳನ್ನು ಕೊಲೆಗೈದು ಆರೋಪಿ ಮಲತಂದೆ ಪರಾರಿಯಾಗಿದ್ದಾನೆ ಎಂದು ಅಮೃತಹಳ್ಳಿ ಠಾಣಾ ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗ ಡಿಸಿಪಿ ಸಜೀತ್, ಅಮೃತಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಈಶಾನ್ಯ ವಿಭಾಗ ಡಿಸಿಪಿ ಸಜೀತ್, ‘ಆ.23ರ ಶನಿವಾರ ಮಧ್ಯಾಹ್ನ 3:30ರ ಸುಮಾರಿಗೆ ಕೊಲೆ ನಡೆದಿದೆ. ಈ ಘಟನೆ ಸಂಬಂಧ ತಾಯಿ ಅನಿತಾ ದೂರು ನೀಡಿದ್ದಾರೆ. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಬಳಿಕ ತಂದೆ ನಾಪತ್ತೆಯಾಗಿದ್ದು, ಶೋಧ ನಡೆಸಲಾಗುತ್ತಿದೆ ಎಂದರು.
Next Story





