ಬೆಂಗಳೂರು | ಸಬ್ ಇನ್‍ಸ್ಪೆಕ್ಟರ್ ಪತ್ನಿ ಆತ್ಮಹತ್ಯೆ

ಬೆಂಗಳೂರು : ಸಬ್ ಇನ್‍ಸ್ಪೆಕ್ಟರ್ ಪತ್ನಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಶಾಲಿನಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ.
ಈಕೆಯ ಪತಿ ನಾಗರಾಜ್ ಎಂಬುವರು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ದಂಪತಿ ಎಚ್‍ಬಿಆರ್ ಬಡಾವಣೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಮೃತ ಶಾಲಿನಿ ಹಾಗೂ ಸಬ್‍ಇನ್‍ಸ್ಪೆಕ್ಟರ್ ನಾಗರಾಜ್ ಇಬ್ಬರು ಇಳಕಲ್ ಮೂಲದವರಾಗಿದ್ದು, ಶಾಲಿನಿ ಹಾಗೂ ನಾಗರಾಜ್ ದಾಂಪತ್ಯದಲ್ಲಿ ಕೆಲ ದಿನಗಳಿಂದ ಬಿರುಕು ಉಂಟಾಗಿತ್ತು. ಶಾಲಿನಿ ಜೊತೆಗಿದ್ದ ಮನೆಯನ್ನು ಬಿಟ್ಟು ಬೇರೆಡೆ ನಾಗರಾಜ್ ಬೇರೆಡೆ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.





