'ಬಸವ ಮಂಟಪ' ಕೃತಿ ವಿವಾದ | ದುಬೈಗೆ ಪಲಾಯನ ಮಾಡಲು ಸಿದ್ಧತೆ ಮಾಡಿದ್ದ ರವಿ ಹಂಜ್

ಬೆಂಗಳೂರು: ವಿವಾದಿತ 'ಬಸವ ಮಂಟಪ' ಕೃತಿಯ ಲೇಖಕ ರವಿ ಹಂಜ್ ಕೊಚ್ಚಿಯಿಂದ ನೇರವಾಗಿ ದುಬೈ ತಲುಪಲು ಸಿದ್ಧತೆ ಮಾಡಿರುವುದು ಗೊತ್ತಾಗಿದೆ.
ವಿವಾದದ ಹಿನ್ನೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ರಾಜ್ಯದ ವಿವಿಧ ಪೊಲೀಸ್ ತಂಡಗಳು ರವಿ ಹಂಜ್ ಗಾಗಿ ಹುಡುಕಾಟ ಶುರು ಮಾಡಿದ್ದವು. ಕೊನೆಯದಾಗಿ ಪೊಲೀಸರು ರವಿ ಹಂಜ್ ರನ್ನು ಸಂಪರ್ಕ ಮಾಡಿದಾಗ ತಾನೂ ಅಮೆರಿಕದ ಚಿಕಾಗೋದಲ್ಲಿ ಇರುವುದಾಗಿ ಪ್ರತಿಕ್ರಿಯೆ ನೀಡಿದ್ದರು. ಆದರೆ ವಾಸ್ತವವಾಗಿ ಕಳೆದ ರಾತ್ರಿ ಬೆಂಗಳೂರಿನಿಂದ ಕೊಚ್ಚಿಗೆ ಹೋಗಿರುವ ರವಿ ಹಂಜ್ ಅಲ್ಲಿಂದ ದುಬೈಗೆ ತೆರಳು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಆದರೆ ರಾಜ್ಯದ ವಿವಿಧ ಪೊಲೀಸ್ ತಂಡಗಳು ರವಿ ಹಂಜ್ ಗೆ ಹುಡುಕಾಟ ನಡೆಸುತ್ತಿದ್ದು, ಲುಕ್ ಔಟ್ ನೋಟಿಸ್ ಜಾರಿ ಕೂಡ ಮಾಡಲಾಗಿತ್ತು. ಹೀಗಾಗಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಫ್ಲೈಟ್ ಹಿಡಿಯುವಾಗ ಭದ್ರತಾ ಸಿಬ್ಬಂದಿ ರವಿ ಹಂಜ್ ರನ್ನು ವಶಕ್ಕೆ ಪಡೆದು ಬೆಳಗಾವಿ ಮಾರ್ಕೆಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Next Story




