Bengaluru | ಪಿಜಿಯಲ್ಲಿ ಸಿಲಿಂಡರ್ ಸ್ಫೋಟ; ವ್ಯಕ್ತಿ ಮೃತ್ಯು

ಸಾಂದರ್ಭಿಕ ಚಿತ್ರ
ಬೆಂಗಳೂರು : ನಗರದಲ್ಲಿರುವ ಕುಂದಲಹಳ್ಳಿ ಕಾಲನಿಯ ಅತಿಥಿ ಗೃಹವೊಂದರ(ಪಿಜಿ) ಅಡುಗೆ ಕೋಣೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬಳ್ಳಾರಿ ಮೂಲದ ಅರವಿಂದ್(23) ಮೃತಪಟ್ಟಿದ್ದು, ಅವರು ಸಾಫ್ಟ್ ವೇರ್ ಸಂಸ್ಥೆಯಲ್ಲಿ ಸೀನಿಯರ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಪಿಜಿಯಲ್ಲಿದ್ದ ವೆಂಕಟೇಶ್, ವಿಶಾಲ್ ವರ್ಮಾ, ಸಿ.ವಿ. ಗೋಯಲ್ ಎಂಬುವರು ಗಾಯಗೊಂಡಿದ್ದಾರೆ.
Next Story





