ಬೆಂಗಳೂರು | ‘ರೀಲ್ಸ್ ಗೀಳು’ ನಡುರಸ್ತೆಯಲ್ಲೇ ವಿಡಿಯೋ ಮಾಡುತ್ತಿದ್ದ ಯುವಕ ಪೊಲೀಸ್ ವಶಕ್ಕೆ

ಬೆಂಗಳೂರು : ರೀಲ್ಸ್ ಗೀಳಿನಿಂದ ನಡುರಸ್ತೆಯಲ್ಲಿ ವಿಡಿಯೋ ಮಾಡುತ್ತಿದ್ದ ಯುವಕನನ್ನು ಇಲ್ಲಿನ ಎಸ್.ಜೆ.ಪಾರ್ಕ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.
ಪ್ರಶಾಂತ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತ ವೃತ್ತಿಯಲ್ಲಿ ಡ್ರೈವರ್ ಆಗಿದ್ದು, ರೀಲ್ಸ್ ವ್ಯಾಮೋಹ ಬೆಳೆಸಿಕೊಂಡಿದ್ದ. ಹೀಗಾಗಿ, ಎಸ್.ಜೆ.ಪಾರ್ಕ್‍ನ ಮುಖ್ಯರಸ್ತೆಯಲ್ಲಿ ಕುರ್ಚಿ ಹಾಕಿ ಕುಳಿತು ಟೀ ಕುಡಿಯುತ್ತ ರೀಲ್ಸ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪ್ರಶಾಂತ್ ರೀಲ್ಸ್ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುತ್ತಿದ್ದಂತೆ, ಕೆ.ಆರ್.ಮಾರ್ಕೆಟ್ ಠಾಣೆ ಸೋಷಿಯಲ್ ಮೀಡಿಯಾ ವಿಂಗ್ ಎಸ್.ಜೆ.ಠಾಣೆ ಪೊಲೀಸರಿಗೆ ಮಾಹಿತಿ ನೀಡಿತ್ತು.
ಇದರ ಆಧಾರದ ಮೇರೆಗೆ ಆರೋಪಿತನ ವಿರುದ್ಧ ಎನ್‍ಸಿಆರ್ ಪ್ರಕರಣ ದಾಖಲಿಸಿಕೊಂಡು, ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





