ಬೆಂಗಳೂರು | ಅಕ್ರಮವಾಗಿ ನೆಲೆಸಿದ್ದ 9 ಮಂದಿ ವಿದೇಶಿ ಪ್ರಜೆಗಳ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಪಾಸ್ಪೋರ್ಟ್ ಮತ್ತು ವೀಸಾ ಅವಧಿ ಅಂತ್ಯಗೊಂಡ ನಂತರವೂ ಅಕ್ರಮವಾಗಿ ಬೆಂಗಳೂರಿನಲ್ಲೇ ನೆಲೆಸಿದ್ದ 9 ಮಂದಿ ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಜು.22ರ ಮಂಗಳವಾರ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಅಧಿಕಾರಿಗಳು ವಿವಿಧ ವೀಸಾಗಳಡಿ ಭಾರತ ದೇಶಕ್ಕೆ ಬಂದು ವೀಸಾ ಅವಧಿ ಮುಗಿದಿದ್ದರೂ ಸಹ ನಗರದಲ್ಲಿ ನೆಲೆಸಿದ್ದ 9 ವಿದೇಶಿ ಪ್ರಜೆಗಳನ್ನು ಬಂಧಿಸಿದ್ದು, ಅವರನ್ನು ಡಿಟೆನ್ಷನ್ ಸೆಂಟರ್ಗೆ ಬಿಡಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಈ ಪೈಕಿ ನಾಲ್ವರು ನೈಜೀರಿಯಾ ದೇಶದವರಾಗಿದ್ದು, ಒಬ್ಬ ಸುಡಾನ್ ದೇಶದವನು, ಮತ್ತೊಬ್ಬ ಕಾಂಗೋ ದೇಶ ಹಾಗೂ ಇನ್ನಿಬ್ಬರು ಘಾನಾ ದೇಶದ ಪ್ರಜೆಗಳಾಗಿರುತ್ತಾರೆ. ಈ ಪೈಕಿ ನೈಜೀರಿಯಾ ದೇಶದ ಒಬ್ಬ ಪ್ರಜೆಯನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದ್ದು, ಉಳಿದವರನ್ನು ಅವರುಗಳ ದೇಶಕ್ಕೆ ಕಳುಹಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಿಸಿಬಿ ಉನ್ನತ ಮೂಲಗಳು ತಿಳಿಸಿವೆ.
Next Story





