80.90 ಕೋಟಿ ರೂ. ಮೌಲ್ಯದ ಸರಕಾರಿ ಜಮೀನು ಒತ್ತುವರಿ ತೆರವು : ಜಿಲ್ಲಾಧಿಕಾರಿ ಜಿ.ಜಗದೀಶ್

ಬೆಂಗಳೂರು : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ 80.90 ಕೋಟಿ ರೂ. ಅಂದಾಜು ಮೌಲ್ಯದ ಒಟ್ಟು 16 ಎಕರೆ 0.23 ಗುಂಟೆ ಸರಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರಕಾರದ ವಶಕ್ಕೆ ಪಡೆಯಲಾಯಿತು.
ಶನಿವಾರ ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸ್ಮಶಾನ, ಗುಂಡುತೋಪು, ಡ್ರೈನೇಜ್, ರಾಜಕಾಲುವೆ, ಸರಕಾರಿ, ಗೋಮಾಳ, ಸರಕಾರಿ ಕೆರೆ, ಸರಕಾರಿ ಗೋಮಾಳ ಮತ್ತು ಹಿಡುವಳಿ ಸರ್ವೆ ನಂಬರ್ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್, ಜಿಲ್ಲಾಧಿಕಾರಿಗಳ ಕಚೇರಿಯ ಕಚೇರಿ ಸಹಾಯಕರು, ತಾಲೂಕಿನ ತಹಶೀಲ್ದಾರ್‍ಗಳು ಉಪಸ್ಥಿತರಿದ್ದರು.
Next Story





