Bengaluru | 257 ಪ್ರಕರಣಗಳ 211 ಆರೋಪಿಗಳ ವಶ : 13.76 ಕೋಟಿ ರೂ. ಮೌಲ್ಯದ ಸ್ವತ್ತುಗಳ ವಶ

ಸಾಂದರ್ಭಿಕ ಚಿತ್ರ
ಬೆಂಗಳೂರು : ಬೆಂಗಳೂರು ನಗರ ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಾಗೂ ಬೆಂಗಳೂರು ನಗರ ಮತ್ತು ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು 257 ಪ್ರಕರಣಗಳನ್ನು ಭೇದಿಸಿದ ಪೊಲೀಸರು, 211 ಆರೋಪಿಗಳನ್ನು ವಶಕ್ಕೆ ಪಡೆದು, ಆರೋಪಿಗಳಿಂದ ವಶದಿಂದ ಸುಮಾರು 13.76 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
8 ಕೆಜಿ 269 ಗ್ರಾಂ ಚಿನ್ನಾಭರಣಗಳು, 410 ಮೊಬೈಲ್ ಪೋನ್ಗಳು, 175 ದ್ವಿಚಕ್ರ ವಾಹನಗಳು 18 ಕೆಜಿ 221 ಗ್ರಾಂ ಬೆಳ್ಳಿಯ ವಸ್ತುಗಳು, 15 ಮೂರು ಚಕ್ರದ ವಾಹನಗಳು, ಒಂದು ಕ್ಯಾಂಟರ್, 343 ಕೆಜಿ ಡ್ರೈ ಪೂಟ್ಸ್, ಸಾಂಬಾರ್ ಪದಾರ್ಥಗಳು, 7 ನಾಲ್ಕು ಚಕ್ರ ವಾಹನಗಳು, 22 ಗ್ಯಾಸ್ ಸಿಲಿಂಡರ್, 3 ಲ್ಯಾಪ್ಟಾಪ್ಗಳು, 86 ಕೆಜಿ ತಾಮ್ರದ ವೈಯರ್ ಸೇರಿ 13.76ಕೋಟಿ ರೂ.ಮೌಲ್ಯದ ವಸ್ತುಗಳನ್ನು ಬೆಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Next Story




