Bengaluru | ಸ್ನೇಹಿತನೊಂದಿಗೆ ವಾಕಿಂಗ್ ಮಾಡುತ್ತಿದ್ದ ಯುವತಿಗೆ ಅಸಭ್ಯವಾಗಿ ಸ್ಪರ್ಶಿಸಿದ್ದ ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ | PC : AI
ಬೆಂಗಳೂರು, ಮೇ 6: ಸ್ನೇಹಿತನೊಂದಿಗೆ ರಾತ್ರಿ ವೇಳೆ ವಾಕಿಂಗ್ ಹೋಗುತ್ತಿದ್ದ ಯುವತಿಯನ್ನು ಅಸಭ್ಯವಾಗಿ ಸ್ಪರ್ಶಿಸುವ ಮೂಲಕ ಕಿರುಕುಳ ನೀಡಿದ್ದ ಆರೋಪಿಯನ್ನು ಸದಾಶಿವನಗರ ಠಾಣೆಪೊಲೀಸರು ಬಂಧಿಸಿದ್ದಾರೆ. ಆಕಾಶ್ ಎಂಬಾತ ಬಂಧಿತ ಆರೋಪಿ.
ಮೇ 2ರಂದು ರಾತ್ರಿ 9:50ರ ಸುಮಾರಿಗೆ ಇಲ್ಲಿನ ಎಂಎಸ್ಆರ್ ನಗರದ 3ನೇ ಕ್ರಾಸ್ ರಸ್ತೆಯಲ್ಲಿ 22 ವರ್ಷದ ಯುವತಿ ತನ್ನ ಸ್ನೇಹಿತನೊಂದಿಗೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿ, ಯುವತಿಯ ದೇಹದ ಹಿಂಭಾಗ ಸ್ಪರ್ಶಿಸಿ ಪರಾರಿಯಾಗಿದ್ದಾರೆ.
ಆರೋಪಿಯ ದ್ವಿಚಕ್ರ ವಾಹನದ ನಂಬರ್ ಅನ್ನು ಸ್ಪಷ್ಟವಾಗಿ ಗಮನಿಸಿದ್ದ ಯುವತಿ ಸದಾಶಿವನಗರ ಪೊಲಿಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
Next Story




