Bengaluru | ಸಿಗರೇಟ್ ಹೊಗೆ ಬಿಟ್ಟ ವಿಚಾರಕ್ಕೆ ಗಲಾಟೆ: ಆಟೋ ಚಾಲಕನ ಕೊಲೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಸಿಗರೇಟ್ ಸೇದಿ ಹೊಗೆ ಬಿಟ್ಟ ವಿಚಾರಕ್ಕೆ ಆರಂಭವಾದ ಗಲಾಟೆ ಆಟೋರಿಕ್ಷಾ ಚಾಲಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಅಬ್ಬಿಗೆರೆ ಮುಖ್ಯರಸ್ತೆಯಲ್ಲಿ ಮೇ 24ರ ರವಿವಾರ ತಡರಾತ್ರಿ ವರದಿಯಾಗಿದೆ.
ಬಾಗಲೂರಿನ ರಾಜಾಸಾಬ್ ಪಾಳ್ಯದ ನಿವಾಸಿ ಸೈಯದ್ ಶಫೀ (36) ಹತ್ಯೆಯಾದ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ದರ್ಶನ್ ಎಂಬಾತನನ್ನು ಚಿಕ್ಕಬಾಣಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಚಿಕ್ಕಬಾಣಾವರ ಠಾಣೆ ಪೊಲೀಸರು ಆರೋಪಿ ದರ್ಶನ್ನನ್ನು ಬಂಧಿಸಿದ್ದಾರೆ. ದರ್ಶನ್ ವಿರುದ್ಧ 2023ರಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿರುವುದು ಬೆಳಕಿಗೆ ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್ ಮಾಹಿತಿ ನೀಡಿದ್ದಾರೆ.
Next Story




