Bengaluru | ಎಸ್ಐಆರ್ ಜಾಗೃತಿ ಅಭಿಯಾನಕ್ಕೆ ಚಾಲನೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಹಾಗೂ ಮತದಾನದ ಹಕ್ಕಿನ ಕುರಿತು ಅರಿವು ಮೂಡಿಸುವ ಸಲುವಾಗಿ ‘ನನ್ನ ಮತ, ನನ್ನ ಹಕ್ಕು ಒಕ್ಕೂಟ’ದ ವತಿಯಿಂದ ಬುಧವಾರ ನಗರದ ವಳ್ಳುವರ್ ಪುರಂನಲ್ಲಿರುವ (ಮಂತ್ರಿ ಮಾಲ್ ಹಿಂಭಾಗ) ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ದಲಿತ ಮುಖಂಡ ಬಸವರಾಜ್ ಕೌತಾಳ್, ಪಿಟಿಸಿಎಲ್ ಮಂಜುನಾಥ್, ಎಐಎಲ್ಎಜೆ ಪ್ರಧಾನ ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಜಾರಿಯೊ, ಸ್ಲಂ ಜನರ ಸಂಘಟನೆಯ ಸಂಚಾಲಕ ಐಸಾಕ್ ಅಮೃತರಾಜ್, ವಿಸಿಕೆ ಪಕ್ಷದ ವಡಿವೇಲು, ಪಿಯುಸಿಎಲ್ನ ಐಶ್ವರ್ಯಾ, ರವಿಕುಮಾರ್, ಲೇಖಕ ಶ್ರೀಪಾದ್ ಭಟ್, ಉಪನ್ಯಾಸಕ ಹುಲಿಕುಂಟೆ ಮೂರ್ತಿ, ವಕೀಲೆ ಪೂರ್ಣಾ ಆರ್., ಎಸ್ಎಫ್ಪಿಡಿಯ ಲಾವಣ್ಯ ಆರ್.ಜೆ., ಅಶ್ವಿನಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಲ್ಲೇಶ್ವರಂ, ಯಶವಂತಪುರ ಹಾಗೂ ಪೀಣ್ಯ ಪ್ರದೇಶಗಳಲ್ಲಿ ಬಸ್ ಪ್ರಯಾಣಿಕರು, ಬೀದಿ ವ್ಯಾಪಾರಿಗಳು, ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಅಂಗಡಿ ಮಾಲಕರಿಗೆ ಕರಪತ್ರಗಳನ್ನು ವಿತರಿಸಿದರು. ಇದೇ ವೇಳೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಮ್ಯಾಪಿಂಗ್ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬೇಕು ಮತ್ತು ಎಸ್ಐಆರ್ಗೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಜನರಿಗೆ ಅರಿವು ಮೂಡಿಸಿದರು.




