Bengaluru | ಕಾಂಪೌಂಡ್ ಕುಸಿದು ಬಾಲಕ ಮೃತ್ಯು; ಬಾಲಕಿಗೆ ಗಾಯ

ಸಾಂದರ್ಭಿಕ ಚಿತ್ರ
ಬೆಂಗಳೂರು : ಆಟವಾಡುವಾಗ ಕಾಂಪೌಂಡ್ ಕುಸಿದು ಬಾಲಕನೊಬ್ಬ ಮೃತಪಟ್ಟಿದ್ದು, ಮತ್ತೋರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಿಕೊಡಿಗೆಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿರುವುದು ವರದಿಯಾಗಿದೆ.
ಮೃತ ಬಾಲಕನನ್ನು ಅಫ್ರಿನ್ (5) ಎಂದು ಗುರುತಿಸಲಾಗಿದೆ. ಸಮನ್ವಿ (5) ಗಾಯಗೊಂಡ ಬಾಲಕಿ.
ಸಂಜೆ ಮನೆಯ ಅಂಗಳದಲ್ಲಿ ಅಕ್ಕಪಕ್ಕದ ಮನೆ ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ಕಾಂಪೌಂಡ್ ಗೋಡೆ ಕುಸಿದಿದ್ದು, ಅಫ್ರಿನ್ ಹಾಗೂ ಸಮನ್ವಿ ಮೇಲೆ ಬಿದ್ದಿದೆ. ಬಾಲಕನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡಿರುವ ಬಾಲಕಿಯನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
Next Story




