Bengaluru | ಕಾಟನ್‍ಪೇಟೆಯಲ್ಲಿ ವಾಲಿದ ಬೃಹತ್ ಕಟ್ಟಡ, ಆಟೋ ಜಖಂ

ಬೆಂಗಳೂರು : ನಗರದ ಕಾಟನ್ ಪೇಟೆಯಲ್ಲಿ ಬೃಹತ್ ಕಟ್ಟಡವೊಂದು ಒಂದು ಬದಿ ವಾಲಿದ ಪರಿಣಾಮ ಆಟೋವೊಂದು ಜಖಂಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವಾಲಿದ ಕಟ್ಟಡದ ಒಳಗೆ ಸಿಲುಕಿದ್ದ ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಕಟ್ಟಡದಲ್ಲಿ ಖಾಸಗಿ ಕ್ಲಿನಿಕ್ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಕಟ್ಟಡವನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
Next Story




