Bengaluru | ಹೆಣ್ಣು ಮಗು ಅನುಮಾನಾಸ್ಪದ ಮೃತ್ಯು; ಪೊಲೀಸರಿಂದ ಪರಿಶೀಲನೆ

ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡಹಳ್ಳಿಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಹೆಣ್ಣು ಮಗು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಲಿಕ್ಷಿತಾ(3) ಮೃತ ದುರ್ದೈವಿಯಾಗಿದ್ದು, ಮಲತಾಯಿ ಗಿರಿಜಾಳೇ ಕೊಲೆ ಮಾಡಿದ್ದಾಳೆಂದು ಮಗುವಿನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಅನಾರೋಗ್ಯದಿಂದ ಪತ್ನಿ ಮೃತಪಟ್ಟ ನಂತರ ಮಗುವಿನ ತಂದೆ ಜಗದೀಶ್, ಗಿರಿಜಾ ಜೊತೆಗೆ ವಾಸವಿದ್ದರು. ಇವರ ಜೊತೆಗೇ ಮೂರು ವರ್ಷದ ಮಗು ಲಿಕ್ಷಿತಾ ವಾಸವಾಗಿದ್ದಳು. ಗಿರಿಜಾಳಿಗೂ ಈ ಹಿಂದೆ ಮದುವೆಯಾಗಿತ್ತು. ಜಗದೀಶ್ ಫೈನಾನ್ಸ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಗಂಡ-ಹೆಂಡತಿ ಎಂದು ಹೇಳಿ ಮನೆ ಬಾಡಿಗೆಗೆ ಪಡೆದು ವಾಸವಿದ್ದರು ಎನ್ನಲಾಗಿದೆ.
Next Story




