Bengaluru | ನಕಲಿ ಔಷಧಿ ದಂಧೆ: ಮೂರು ಫಾರ್ಮಾಗಳ ಮೇಲೆ ಎಸ್ಐಟಿ ದಾಳಿ

ಸಾಂದರ್ಭಿಕ ಚಿತ್ರ | PC : Image by zinkevych on Magnific
ಬೆಂಗಳೂರು : ನಕಲಿ ಔಷಧಿ ದಂಧೆ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಹಾಗೂ ವಿತರಕ ವಿರೇಶ್ ನೀಡಿದ ಮಾಹಿತಿಯ ಆಧಾರದ ಮೇಲೆ ನಕಲಿ ಔಷಧಿ ದಂಧೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ(ಎಸ್ಐಟಿ) ಅಧಿಕಾರಿಗಳು ನಗರದ ಮೂರು ಫಾರ್ಮಾಗಳ ಮೇಲೆ ದಾಳಿ ನಡೆಸಿದ್ದು, ನಕಲಿ ಔಷಧಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ ನಕಲಿ ಔಷಧಿಗಳನ್ನು ಖರೀದಿಸಿ ಮಾರಾಟ ಮಾಡಿರುವ ಆರೋಪದ ಮೇರೆಗೆ ರಾಜರಾಜೇಶ್ವರಿ ನಗರದಲ್ಲಿರುವ ಆರ್ ಆರ್ ಫಾರ್ಮಾ, ಚಾಮರಾಜಪೇಟೆಯ ಎಲ್ಎಲ್ಪಿ ಫಾರ್ಮಾ ಹಾಗೂ ತಲಘಟ್ಟಪುರದಲ್ಲಿರುವ ಪಾಟೇಲ್ ಫಾರ್ಮಾ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪತ್ತೆಯಾದ ನಕಲಿ ಔಷಧಿಗಳನ್ನು ಜಪ್ತಿ ಮಾಡಿ, ಫಾರ್ಮಾಗಳ ಮಾಲಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ನಕಲಿ ಔಷಧಿ ದಂಧೆ ಪ್ರಕರಣದ ತನಿಖೆ ಮುಂದುವರಿದಿದ್ದು, ನಕಲಿ ಔಷಧಿಗಳ ಜಾಲದಲ್ಲಿ ಇನ್ನಷ್ಟು ಫಾರ್ಮಾಗಳು ಅಥವಾ ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.




