Bengaluru | ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಸರ್ವೇಯರ್

ಬೆಂಗಳೂರು : ನೆಲಮಂಗಲದ ಬಳಿ ಜಮೀನಿನ ‘11-ಇ’ ನಕ್ಷೆ ತಯಾರಿಸಿಕೊಡಲು ರೈತರೊಬ್ಬರ ಬಳಿ 20 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಸರ್ವೇಯರ್ ಮಹೇಶ್, ನೆಲಮಂಗಲ ತಾಲೂಕು ಕಚೇರಿಯ ಬಳಿ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆ ಬಿದ್ದಿದ್ದಾರೆ.
ನೆಲಮಂಗಲ ತಾಲೂಕಿನ ಗುಡೆಮಾರನಹಳ್ಳಿಯ ಪುಟ್ಟಸ್ವಾಮಿ ತಮ್ಮ ಜಮೀನಿಗೆ ‘11-ಇ’ ನಕ್ಷೆ ತಯಾರಿಸಿಕೊಡಲು, ಪರವಾನಗಿ ಪಡೆದ ಸರ್ವೇಯರ್ ಮಹೇಶ್ ಅವರಿಗೆ ಕೇಳಿದ್ದಾರೆ. ಅದಕ್ಕೆ ಮಹೇಶ್ ದೂರುದಾರರಿಂದ 20 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪುಟ್ಟಸ್ವಾಮಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಬುಧವಾರದಂದು ನೆಲಮಂಗಲ ತಾಲೂಕು ಕಚೇರಿಯ ಬಳಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಆರೋಪಿ ಮಹೇಶ್ನನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು, ಆರೋಪಿಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ-1988ರ ಸೆಕ್ಷನ್ 7(ಎ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story




