Bengaluru | ನಿಯಂತ್ರಣ ತಪ್ಪಿ ಕಬಾಬ್ ಸೆಂಟರ್ಗೆ ನುಗ್ಗಿದ ಕಾರು; ಬಿಸಿ ಎಣ್ಣೆ ಮೈಮೇಲೆ ಬಿದ್ದು ಮೂವರಿಗೆ ಗಾಯ

ಬೆಂಗಳೂರು : ನಿಯಂತ್ರಣ ತಪ್ಪಿದ ಕಾರೊಂದು ಕಬಾಬ್ ಸೆಂಟರ್ಗೆ ನುಗ್ಗಿದ ಘಟನೆ ಬನ್ನೇರುಘಟ್ಟ ಸಮೀಪದ ಹೊಮ್ಮದೇವನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ವೇಳೆ ಕಬಾಬ್ ತಯಾರಿಸಲು ಬಳಸುತ್ತಿದ್ದ ಬಿಸಿ ಎಣ್ಣೆ ಮೈಮೇಲೆ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅ.30ರಂದು ಸಜೀನಾ ಬೇಗಂ ಎಂಬುವರು ಚಲಾಯಿಸುತ್ತಿದ್ದ ಕಾರು ಅತಿವೇಗವಾಗಿ ಬಂದಿದ್ದು, ನಿಯಂತ್ರಣ ತಪ್ಪಿ ಮೊದಲು ರಸ್ತೆಯಲ್ಲಿದ್ದ ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ನೇರವಾಗಿ ಕಬಾಬ್ ಸೆಂಟರ್ಗೆ ನುಗ್ಗಿದೆ. ಅಪಘಾತದ ವೇಳೆ ಕಬಾಬ್ ಸೆಂಟರ್ನಲ್ಲಿದ್ದ ಬಿಸಿ ಎಣ್ಣೆ ಮೈಮೇಲೆ ಬಿದ್ದು ಬಸವರಾಜ್, ಮುನಿಕೃಷ್ಣ ಹಾಗೂ ಮಂಜೇಶ್ ಎಂಬುವರು ಗಂಭೀರವಾಗಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ.
ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಡಿಕ್ಕಿಯ ರಭಸಕ್ಕೆ ರಸ್ತೆಯಲ್ಲಿದ್ದ ಬೈಕ್ಗಳು ಜಖಂಗೊಂಡಿದ್ದು, ಕಬಾಬ್ ಸೆಂಟರ್ನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.
Next Story




