Bengaluru | ಪರಪ್ಪನ ಆಗ್ರಹಾರ ಜೈಲಿನಲ್ಲಿ ಬೇಕರಿಗೆ ಚಾಲನೆ

ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನೂತನ ಬೇಕರಿಯನ್ನು ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಉದ್ಘಾಟಿಸಿದ್ದಾರೆ.
ಈ ಮೊದಲೇ ಪರಪ್ಪನ ಆಗ್ರಹಾರ ಜೈಲಿನಲ್ಲಿ ಬೇಕರಿ ಇತ್ತು. ಈಗ ಅದನ್ನು ಮೇಲ್ದರ್ಜೆಗೆ ಏರಿಸಿ ನವ ಸಂಕಲ್ಪ ಬೇಕರಿ ಹಾಗೂ ನವ ಸಂಕಲ್ಪ ಬೇಕರಿ ಆನ್ ವೀಲ್ಸ್ ಎನ್ನುವ ಎರಡು ಉದ್ದೇಶಗಳೊಂದಿಗೆ ಇಂದು ಮರು ಉದ್ಘಾಟನೆ ಮಾಡಲಾಗಿದೆ.
ನವ ಸಂಕಲ್ಪ ಬೇಕರಿ ಜೈಲಿನ ಒಳಗಿನವರಿಗೆ ಬೇಕರಿ ಪದಾರ್ಥಗಳನ್ನ ಒದಗಿಸಿದರೆ ನವ ಸಂಕಲ್ಪ ಬೇಕರಿ ಆನ್ ವೀಲ್ಸ್ ನಗರದ ವಿವಿಧೆಡೆ ಬೇಕರಿ ಉತ್ಪನ್ನಗಳ ಮಾರಾಟ ಮಾಡಲಿದೆ. ಆ ಮೂಲಕ ಇನ್ನು ಮುಂದೆ ನಗರದ ಬಸ್ ಸ್ಟ್ಯಾಂಡ್ ಗಳು, ಕೋರ್ಟ್ ಕಚೇರಿಗಳು ಹಾಗೂ ಸರ್ಕಾರಿ ಕಚೇರಿಗಳ ಬಳಿ ಜೈಲಿನಲ್ಲಿ ತಯಾರಾದ ಬೇಕರಿ ಪದಾರ್ಥಗಳು ಸಿಗಲಿವೆ.
Next Story




