ಬೆಂಗಳೂರು | ಜೆಡಿ ಡಿಸೈನ್ ವಿದ್ಯಾರ್ಥಿಗಳ ವಿನ್ಯಾಸ ಪ್ರದರ್ಶನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಬೆಂಗಳೂರು: ಜೆಡಿ ಸ್ಕೂಲ್ ಆಫ್ ಡಿಸೈನ್ (ಜೆಡಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿ) ವತಿಯಿಂದ ಜೆಡಿ ಡಿಸೈನ್ ವಿದ್ಯಾರ್ಥಿಗಳ ವಿನ್ಯಾಸ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಚಿತ್ರ ಕಲಾ ಪರಿಷತ್ತಿನಲ್ಲಿ ನಡೆಯಿತು.
ಪ್ರಸಕ್ತ ವರ್ಷ ʼ ಪಾಜ್ʼ ಎಂಬ ಥೀಮ್‌ನೊಂದಿಗೆ ಉದಯೋನ್ಮುಖ ಇಂಟೀರಿಯರ್ ಡಿಸೈನ್ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿತ್ತು. ಈ ಪ್ರದರ್ಶನ ಮೇಳವು ಸುಸ್ಥಿರ ಸಹ- ವಾಸಸ್ಥಾನದ ಜಾಗಗಳು, ಮತ್ತು ಭಾವನಾತ್ಮಕವಾಗಿ ಬುದ್ಧಿವಂತಿಕೆಯಿಂದ ಕೂಡಿದ ಪೀಠೋಪಕರಣಗಳಿಂದ ಹಿಡಿದು ಮರುಕಲ್ಪಿತ ಸಾರ್ವಜನಿಕ ಮೂಲಸೌಕರ್ಯ, ಎಐ ತಂತ್ರಜ್ಞಾನ ಆಧಾರಿತ ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತ ವಿನ್ಯಾಸಗಳನ್ನು ಒಳಗೊಂಡ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಉತ್ತಮವಾದ ವಿನ್ಯಾಸವನ್ನು ರೂಪಿಸಿದ ವಿದ್ಯಾರ್ಥಿಗಳಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪೈಕಿ ಪ್ರಮುಖವಾಗಿ ನ್ಯೂರೋ ಸ್ಪಿಯರ್ (ಅತ್ಯುತ್ತಮ ಸಂಶೋಧನೆ) ಗಾಗಿ ಆರ್.ಎ. ದೀಪ್ತಿ, ಆರ್ಟ್ ಕೆಫೆ (ಅಡಾಪ್ಟಿವ್ ಮರುಬಳಕೆ ಶ್ರೇಷ್ಠತೆ) ಗಾಗಿ ಪ್ರವೀಣ್ ಎಸ್ ಮತ್ತು ಇನ್ಸ್‌ಪಿನಿಟಿ (ನೆಕ್ಸ್ಟ್-ಜನ್ ಡಿಸೈನ್) ಗಾಗಿ ಸಾಯಿ ದರ್ಶನ್ ಕೆ ಜೆ ಅವರು ಪ್ರಶಸ್ತಿ ಪಡೆದುಕೊಂಡರು. ಅದಲ್ಲದೆ ಸುಸ್ಥಿರತೆ, ಪರಂಪರೆಯ ವ್ಯಾಖ್ಯಾನ ಮತ್ತು ಅಂತರ್ಗತ ಸ್ಥಳಗಳ ಮೇಲೆ ಕೇಂದ್ರೀಕರಿಸಿದ ವಿಚಾರಗಳನ್ನು ವಿನ್ಯಾಸಪಡಿಸಿದ ಇನ್ನೂ ಹಲವು ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.







