ಬೆಂಗಳೂರು | ಗಾಂಜಾ ಮಿಶ್ರಿತ ಜೆಲ್ಲಿ ಚಾಕೊಲೇಟ್ ಮಾರಾಟ ಪ್ರಕರಣ: ಇಬ್ಬರ ಬಂಧನ, ಮತ್ತೊಬ್ಬ ಪರಾರಿ

ಸಾಂದರ್ಭಿಕ ಚಿತ್ರ | PC : Meta Ai
ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಹೊಸ ಮಾದರಿಯ ಗಾಂಜಾ ಮಿಶ್ರಿತ ಜೆಲ್ಲಿ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಪ್ರಕರಣದಡಿ ಇಬ್ಬರನ್ನು ಇಲ್ಲಿನ ಬ್ಯಾಟರಾಯಪುರ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮೊಹಮ್ಮದ್ ಜಾಹೀದ್ ಮತ್ತು ಇಸ್ಮಾಯಿಲ್ ಅದ್ನಾನ್ ಎಂಬುವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡ ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರಿಂದ 3 ಲಕ್ಷ ರೂ. ಮೌಲ್ಯದ 1.440 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಗಾಂಜಾದ ಬಟ್ಟಿ ಇಳಿಸಿದ ರಸವನ್ನೇ ಜೆಲ್ಲಿ ಚಾಕೊಲೇಟ್ ಜೊತೆ ಬೆರೆಸುತ್ತಿದ್ದರು. ಇದನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
Next Story





