Bengaluru | ಸಭಾಪತಿ ಸಲೀಂ ಅಹ್ಮದ್-ಸ್ವೀಡನ್ ಇನ್ಫ್ಲುಯೆನ್ಸರ್ ಭೇಟಿ

ಬೆಂಗಳೂರು : ಸ್ವೀಡನ್ನ ಮಹಿಳಾ ಇನ್ಫ್ಲುಯೆನ್ಸರ್ ಅನಿಕಾ ಸನ್ಬಾಮ್ ಅವರು ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್ ಅವರನ್ನು ಭೇಟಿಯಾದರು.
ಸೋಮವಾರ ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದೊಂದಿಗೆ ಆಗಮಿಸಿದ ಅವರನ್ನು ಸಲೀಂ ಅಹ್ಮದ್ ಸನ್ಮಾನಿಸಿದರು.
ಈ ಮಾತನಾಡಿದ ಅವರು, ಮಹಿಳೆಯರ ಭವಿಷ್ಯ ಮತ್ತು ಸಬಲೀಕರಣವನ್ನು ಕೇಂದ್ರವಾಗಿಟ್ಟುಕೊಂಡು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಾರ್ಯವೈಖರಿ ಶ್ಲಾಘನೀಯ ಎಂದರು.
ಈ ವೇಳೆ ಸಂಘದ ಅಧ್ಯಕ್ಷೆ ರೋಶನಿ ಗೌಡ, ಕಾರ್ಯದರ್ಶಿ ಶಶಿಕಲಾ ಕೆ., ಗೌರವ ರಾಜ್ಯಾಧ್ಯಕ್ಷೆ ಗೀತಾ ಸಿ.ಜಿ. ಹಾಗೂ ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ ಇದ್ದರು.
Next Story




