Bengaluru | ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್, ಸಿಮ್ ಪತ್ತೆ

File Photo
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೆ ಸಿಮ್, ಮೊಬೈಲ್ ಹಾಗೂ ನಗದು ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ನಡೆದ ಅನೀರಿಕ್ಷಿತ ಪರಿಶೀಲನೆಯಲ್ಲಿ ಸಿಮ್ ಮೊಬೈಲ್ ಹಾಗೂ ನಗದು ಪತ್ತೆಯಾಗಿದ್ದು ಮೂರು ಪ್ರತ್ಯೇಕ ಎಫ್ ಐ ಆರ್ ಗಳು ಪರಪ್ಪನ ಆಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ದಿಢೀರ್ ಪರಿಶೀಲನೆ ನಡೆಸಿದಾಗ ಮಹಿಳಾ ಬ್ಯಾರಕ್ ನಲ್ಲಿ ಮಹಿಳಾ ಕೈದಿಯ ಬಳಿ 11,900 ರೂ. ಹಾಗೂ ಪುರಷರ ಬ್ಯಾರಕ್ ನಲ್ಲಿ ಮುಹಮ್ಮದ್ ನವಾಝ್ ಎಂಬ ಕೈದಿಯ ಬಳಿ ಸಿಮ್ ಇಲ್ಲದ ಮೊಬೈಲ್ ಹಾಗೂ ಮಾಲ್ತೇಶ್ ಎಂಬಾತನ ಬಳಿ ಕೀ ಪ್ಯಾಡ್ ಫೋನ್ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಸದ್ಯ ಮೂರು ಪ್ರತ್ಯೇಕ ಎಫ್ ಐಆರ್ ಗಳು ದಾಖಲಾಗಿದ್ದು, ಕೈದಿಗಳಿಗೆ ಹೇಗೆ ಮೊಬೈಲ್ ಸಿಕ್ಕಿತ್ತು ಎಂಬ ಬಗ್ಗೆ ಪರೀಶಿಲನೆ ನಡೆಸಲಾಗುತ್ತಿದೆ.
Next Story




