ಬೆಂಗಳೂರು: ಒಂದು ವರ್ಷದಲ್ಲಿ 170ಕ್ಕೂ ಹೆಚ್ಚು ಬಾರಿ ಕಳ್ಳತನ; ಮನೆಗೆಲಸದಾಕೆ ಬಂಧನ

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಮಾಲೀಕರಿಗೆ ಗೊತ್ತಿಲ್ಲದಂತೆ ಕಳೆದೊಂದು ವರ್ಷದಿಂದ 170 ಬಾರಿ ಕಳ್ಳತನ ಮಾಡಿದ್ದ ಮನೆಗೆಲಸದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪರಮೇಶ್ವರಿ ಬಂಧಿತ ಮಹಿಳೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಸೆಂಟ್ ಥಾಮಸ್ ನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಕಳೆದೊಂದು ವರ್ಷದಿಂದ ಮನೆಗೆಲಸ ಮಾಡುತ್ತಿದ್ದ ಈಕೆ, ಸ್ವಲ್ಪ ಸ್ವಲ್ಪವಾಗಿಯೇ 170 ಕ್ಕೂ ಹೆಚ್ಚು ಬಾರಿ ಚಿನ್ನಾಭರಣ ಕದ್ದಿದ್ದಳು ಎನ್ನಲಾಗಿದೆ.
ಮಾಲೀಕರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದಾಗ ಸತ್ಯಾಂಶ ಹೊರಗೆ ಬಂದಿದೆ. ಹೀಗೆ ಕದ್ದ ಚಿನ್ನವನ್ನ ಪರಮೇಶ್ವರಿ ಮಡಿವಾಳದ ಗಿರವಿ ಅಂಗಡಿಯೊಂದರಲ್ಲಿ ಅಡವಿಟ್ಟಿದ್ದು ಸುಮಾರು 25 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Next Story




