ಬೆಂಗಳೂರು| ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಗೆ ನೂತನ ಪದಾಧಿಕಾರಿಗಳ ಆಯ್ಕೆ
ನೂತನ ಅಧ್ಯಕ್ಷರಾಗಿ ಶಂಸುದ್ದೀನ್ ಅಡೂರ್ ಆಯ್ಕೆ

ಶಂಸುದ್ದೀನ್ ಅಡೂರ್
ಬೆಂಗಳೂರು: ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಶಂಸುದ್ದೀನ್ ಅಡೂರ್ ಹಾಗು ಉಪಾಧ್ಯಕ್ಷರಾಗಿ ಉಮರ್ ಹಾಜಿ ಬಿ.ಎಂ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ವಾಹೀದ್ ಕೈರ್ ಖಾನ್, ಜಂಟಿ ಕಾರ್ಯದರ್ಶಿಯಾಗಿ ಮುಹಮ್ಮದ್ ತಸ್ಲೀಲ್, ಖಜಾಂಚಿಯಾಗಿ ಮುಹಮ್ಮದ್ ಅಶ್ರಫ್ ಕುಚೂರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಹ್ಮದ್ ಬಾವ ಬಜಾಲ್, ಯೂಸುಫ್ ಪೆರೋಡಿ, ಬಿ.ಎಂ. ಹನೀಫ್, ಯೂಸುಫ್ ಮಾಣಿ, ಅಬ್ದುಲ್ ಖಾದರ್ ಮುಶ್ತಾಕ್, ಅತ್ತೂರು ಚೈಯ್ಯಬ್ಬ, ಅಶ್ರಫ್ ಕೋಡಿ, ತನ್ವೀರ್ ಅಹ್ಮದ್, ಮುಹಮ್ಮದ್ ಹನೀಫ್, ಜುನೈದ್ ಪಿ.ಕೆ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಟಿ.ಕೆ ಅವರು ಪದನಿಮಿತ್ತ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ನಾಲ್ವರು ಹಿರಿಯ ಸದಸ್ಯರಾದ ಜಿ.ಎ.ಬಾವ, ಇಬ್ರಾಹಿಂ ಗೂನಡ್ಕ, ಸಿದ್ದೀಕ್ ಬ್ಯಾರಿ ಹಾಗೂ ಹಂಝತುಲ್ಲಾ ಕುವೆಂಡ ಅವರು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ನ ಕಾರ್ಯಕಾರಿ ಸಮಿತಿಗೆ ಸೇರ್ಪಡೆಯಾಗಿದ್ದಾರೆ.
ಈ ವರ್ಷದಿಂದ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ನ ಸುಗಮ ಆಡಳಿತಕ್ಕೆ ಮಾರ್ಗದರ್ಶನ ಮತ್ತು ನಿರ್ದೇಶನ ನೀಡಲು ಹೊಸ ಆಡಳಿತ ಮಂಡಳಿಯನ್ನು ಬೈಲಾದಲ್ಲಿ ಸೇರಿಸಿಕೊಳ್ಳಲಾಗಿದೆ. ಈ ಆಡಳಿತ ಮಂಡಳಿಯು ಅಸೋಸಿಯೇಷನ್ ನ ಹಿರಿಯ ಸದಸ್ಯರಾದ ಸೈಯದ್ ಮುಹಮ್ಮದ್ ಬ್ಯಾರಿ, ಬಿ.ಎಂ. ಫಾರೂಕ್, ಉಮರ್ ಟೀಕೆ, ಇಕ್ಬಾಲ್ ಅಹ್ಮದ್ ಹಾಗು ಡಾ. ಮಕ್ಸೂದ್ ಅಹ್ಮದ್ ರವರನ್ನು ಒಳಗೊಂಡಿರುತ್ತದೆ







