Bengaluru | ಪ್ರದರ್ಶನ ಮುಂದೂಡುವಂತೆ ಸುಚಿತ್ರಾ ಅಕಾಡಮಿಗೆ ನೋಟಿಸ್
ಬೆಂಗಳೂರು : ಸುಚಿತ್ರಾ ಸಿನೆಮಾ ಮತ್ತು ಕಲ್ಚರಲ್ ಅಕಾಡಮಿಯಲ್ಲಿ ಅ.31ರಂದು ನಡೆದ ಗಾಂಧಿ ಹತ್ಯೆಯ ಸತ್ಯ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ದೂರು ಪ್ರತಿದೂರುಗಳು ದಾಖಲಾಗಿದ್ದು, ಮುಂದಿನ ಆದೇಶದ ವರೆಗೆ ಸುಚಿತ್ರಾ ಅಕಾಡಮಿಯಲ್ಲಿನ ಪ್ರದರ್ಶನಗಳನ್ನು ಮುಂದೂಡುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಗಾಂಧಿ ಹತ್ಯೆಯ ಸತ್ಯ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರುಗಳು ತನಿಖೆಯಲ್ಲಿವೆ. ಆದ್ದರಿಂದ ಸುಚಿತ್ರಾ ಅಕಾಡಮಿಯಲ್ಲಿ ನಡೆಯುತ್ತಿರುವ ಪ್ರದರ್ಶನಗಳನ್ನು ಮುಂದಿನ ಆದೇಶದವರೆಗೂ ಮುಂದೂಡುವಂತೆ ಸೂಚಿಸಲಾಗಿದೆ.
ಒಂದು ವೇಳೆ ಯಾವುದೇ ನಾಟಕ, ಪ್ರದರ್ಶನಗಳು ನಡೆದು ಕಾನೂನು ಸುವ್ಯವಸ್ಥೆಗೆ ತೊಂದರೆಯಾದಲ್ಲಿ ಅಗತ್ಯ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story




