ಬಿಡದಿ ಟೌನ್‍ಶಿಪ್ ಯೋಜನೆ ಕೈಬಿಡಲು ಆಗ್ರಹಿಸಿ ವಿಷ ಬಾಟಲಿ ಪ್ರದರ್ಶನ

ಬೆಂಗಳೂರು/ಬಿಡದಿ : ಬಿಡದಿ ಹೋಬಳಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ವಿರುದ್ಧ ಭೈರಮಂಗಲದಲ್ಲಿ ನಡೆಯುತ್ತಿರುವ ಅನಿರ್ದಿಷ್ಠಾಧಿ ಧರಣಿಯಲ್ಲಿ ರೈತರು ಜಂಟಿ ಅಳತೆ ಪ್ರಮಾಣೀಕರಣ (ಜೆಎಂಸಿ) ವಿರೋಧಿಸಿ ಮಂಗಳವಾರ ವಿಷದ ಬಾಟಲಿ ಹಿಡಿದು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಯೋಜನೆಯನ್ನು ವಿರೋಧಿಸಿ ಭೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘವು ನಡೆಸುತ್ತಿರುವ ಹೋರಾಟಕ್ಕೆ ಹಾಸನ, ರಾಮನಗರ ಜಿಲ್ಲೆಯ ರೈತರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಕೆಲವು ರೈತರು ಒಂದು ಕಡೆ ಟೌನ್‍ಶಿಪ್ ವಿರುದ್ಧದ ಘೋಷಣೆಗಳು ಕೂಗುತ್ತಿದ್ದರೆ, ಮತ್ತೊಂದೆಡೆ ಯೋಜನೆಯ ಪರವಾದ ಘೋಷಣೆಗಳು ಕೇಳಿಬಂದವು. ಯೋಜನೆಯ ಪರ ರೈತರು ಪ್ರಕರಣ ದಾಖಲಾಗಿರುವರನ್ನು ಕೂಡಲೇ ಬಂಧಿಸಬೇಕು ಎಂದು ಹೇಳಿ ರಸ್ತೆ ತಡೆ ಮಾಡಲು ಮುಂದಾದರು. ಬಿಡದಿ ಠಾಣೆ ಇನ್‍ಸ್ಪೆಕ್ಟರ್ ಧರಣಿ ಸ್ಥಳಕ್ಕೆ ಆಗಮಿಸಿ, ರಸ್ತೆ ತಡೆ ನಡೆಸದಂತೆ ರೈತರ ಮನವೊಲಿಸಲು ಪ್ರಯತ್ನಿಸಿದರು.
Next Story




