ಬಿಡದಿ ಟೌನ್‍ಶಿಪ್ ವಿರೋಧಿ ಜೆಡಿಎಸ್ ಪಾದಯಾತ್ರೆ

ಬೆಂಗಳೂರು : ಬಿಡದಿ ಟೌನ್‍ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನ ವಿರೋಧಿಸಿ ಆ.9ರಿಂದ 11ರ ವರೆಗೆ ಪಾದಯಾತ್ರೆ ನಡೆಯಲಿದ್ದು, ಆ. 14ಕ್ಕೆ ಬೃಹತ್ ‘ವಿಧಾನಸೌಧ ಚಲೋ’ ಹೋರಾಟವನ್ನು ನಡೆಸುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ನಿಧನದಿಂದ ಮುಂದೂಡಿಕೆ ಆಗಿದ್ದ ಪಾದಯಾತ್ರೆಗೆ ಈಗ ಹೊಸ ದಿನಾಂಕ ನಿಗದಿ ಮಾಡಲಾಗಿದೆ. ಬಿಡದಿ ಟೌನ್‍ಶಿಪ್ ನೆಪದಲ್ಲಿ 6 ಕಂದಾಯ ಗ್ರಾಮಗಳ ಕೃಷಿ ಭೂಮಿ ಕಬಳಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
Next Story




