ಝಮೀರ್ ಅಹ್ಮದ್ ಯಾವ ಮುಖ ಇಟ್ಟುಕೊಂಡು ಸಚಿವರಾಗಿ ಮುಂದುವರಿಯುತ್ತಿದ್ದಾರೆ: ಬಿಜೆಪಿ

ಬಿ.ಝಡ್.ಝಮೀರ್ ಅಹ್ಮದ್ ಖಾನ್
ಬೆಂಗಳೂರು : ‘ವಸತಿ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಅವರು ಇನ್ನು ಯಾವ ಮುಖ ಇಟ್ಟುಕೊಂಡು ಸಚಿವರಾಗಿ ಮುಂದುವರೆಯುತ್ತಿದ್ದಾರೆ?’ ಎಂದು ಪ್ರತಿಪಕ್ಷ ಬಿಜೆಪಿ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದೆ.
ರವಿವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಸರಕಾರದ ಕರಾಳಮುಖವನ್ನು ಸ್ವತಃ ಆಡಳಿತ ಪಕ್ಷದ ಶಾಸಕರುಗಳೇ ದಿನಕ್ಕೊಬ್ಬರಂತೆ ಬಿಚ್ಚಿಡುತ್ತಿದ್ದಾರೆ. ನಿಮ್ಮ ಸರಕಾರದ ಸಾಮಾಜಿಕ ನ್ಯಾಯ ಬಟಾ ಬಯಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
‘ಕಾಂಗ್ರೆಸ್ ಸರಕಾರದಲ್ಲಿ ಸ್ವಪಕ್ಷದ ಶಾಸಕರೇ ಲಂಚದ ಆರೋಪ ಮಾಡುತ್ತಿದ್ದಾರೆ. ಸರಕಾರದ ಕಮಿಷನ್ ವ್ಯವಹಾರದ ವಿರುದ್ಧ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರೇ ಸಿಡಿದೆದ್ದಿದ್ದಾರೆ. ಹಗರಣದ ಕುರಿತು ತನಿಖೆ ನಡೆಸಿ ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಶೇ.80ರಷ್ಟು ಕಮಿಷನ್ ವ್ಯವಹಾರಕ್ಕೆ ಸಿಕ್ಕ ಮತ್ತೊಂದು ಸರ್ಟಿಫಿಕೇಟ್ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಸ್ವಪಕ್ಷದ ಶಾಸಕರೇ ಲಂಚದ ಆರೋಪ ಮಾಡುತ್ತಿದ್ದಾರೆ. ಸರ್ಕಾರದ ಕಮಿಷನ್ ವ್ಯವಹಾರದ ವಿರುದ್ಧ ಹಿರಿಯ ಶಾಸಕರೇ ಸಿಡಿದೆದ್ದಿದ್ದಾರೆ. ಹಗರಣದ ಕುರಿತು ತನಿಖೆ ನಡೆಸಿ ಅಂತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ 80% ಕಮಿಷನ್ ವ್ಯವಹಾರಕ್ಕೆ ಸಿಕ್ಕ ಮತ್ತೊಂದು ಸರ್ಟಿಫಿಕೇಟ್.
— BJP Karnataka (@BJP4Karnataka) June 22, 2025
ಮುಖ್ಯಮಂತ್ರಿ @siddaramaiah ಅವರೇ,… pic.twitter.com/xLuFvfozQw







