Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ಬಾಯಲ್ಲಿ ಸಂಸ್ಕೃತಿ, ಮಾತಿನಲ್ಲಿ ವಿಕೃತಿ;...

ಬಾಯಲ್ಲಿ ಸಂಸ್ಕೃತಿ, ಮಾತಿನಲ್ಲಿ ವಿಕೃತಿ; ಇದೇ ಸಂಘಪರಿವಾರದ ಅಸಲಿ ಸಂಸ್ಕಾರ : ಬಿ.ಕೆ.ಹರಿಪ್ರಸಾದ್

ವಾರ್ತಾಭಾರತಿವಾರ್ತಾಭಾರತಿ7 Nov 2026 1:25 AM IST
share
ಬಾಯಲ್ಲಿ ಸಂಸ್ಕೃತಿ, ಮಾತಿನಲ್ಲಿ ವಿಕೃತಿ; ಇದೇ ಸಂಘಪರಿವಾರದ ಅಸಲಿ ಸಂಸ್ಕಾರ : ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಕೆಲವರಿಗೆ ಅವರ ಮನೆಯಲ್ಲಿ ಮಕ್ಕಳಾದರೂ ಆರೆಸ್ಸೆಸ್ ನೆನಪಾಗುತ್ತದೆ ಎಂದು ಹೇಳಿರುವ ಸಿ.ಟಿ.ರವಿ, ನಿಮ್ಮ ಮಾತಿನಲ್ಲಿರುವುದು ರಾಜಕೀಯ ವ್ಯಂಗ್ಯವಲ್ಲ, ಹೆಣ್ಣಿನ ಹೆರಿಗೆ ಮತ್ತು ತಾಯ್ತನವನ್ನು ರಾಜಕೀಯ ಕೆಸರೆರಚಾಟಕ್ಕೆ ಎಳೆದು ತರುವ ಅತ್ಯಂತ ಹೀನ ಮನಸ್ಥಿತಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕಿಡಿಗಾರಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಮಾತೆತ್ತಿದರೆ ಭಾರತೀಯ ಸಂಸ್ಕೃತಿ, ಮಹಿಳೆಯರ ಗೌರವ, ಮಾತೃಶಕ್ತಿ ಎಂದು ಬಿಟ್ಟಿ ಪ್ರವಚನ ಮಾಡುವ ಸಂಘಪರಿವಾರದ ನಾಯಕರ ನಾಲಿಗೆಯಿಂದ ಇಂತಹ ಮಾತುಗಳು ಹೊರಬರುವುದರಲ್ಲಿ ಆಶ್ಚರ್ಯವೇನಿಲ್ಲ. ಹೆಣ್ಣಿನ ತಾಯ್ತನವನ್ನೂ ರಾಜಕೀಯ ಅಪಹಾಸ್ಯದ ಸರಕನ್ನಾಗಿ ಮಾಡಿಕೊಳ್ಳುವಷ್ಟು ನಿಮ್ಮ ಚಿಂತನೆಯೇ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿ.ಟಿ.ರವಿಯವರೇ, ಮಹಾಮಾನವ ನರೇಂದ್ರ ಮೋದಿಗೆ ಬೆಳಗಾದರೆ ನೆಹರೂ ನೆನಪಾಗುತ್ತಾರೆ, ಸಂಜೆಯಾದರೆ ರಾಜೀವ್ ಗಾಂಧಿ ನೆನಪಾಗುತ್ತಾರೆ. ದೇಶದಲ್ಲಿ ಮಳೆ ಬಂದರೂ ನೆಹರೂ, ಬರ ಬಂದರೂ ನೆಹರೂ, ಬೆಲೆ ಏರಿದರೂ ನೆಹರೂ, ಆಡಳಿತ ವೈಫಲ್ಯವಾದರೂ ನೆಹರೂ. ನಿಮ್ಮದೇ ವಿಕೃತ ತರ್ಕವನ್ನು ನಿಮ್ಮ ನಾಯಕರಿಗೆ ಅನ್ವಯಿಸಿದರೆ? ಎಂದು ಅವರು ಪ್ರಶ್ನಿಸಿದ್ದಾರೆ.

‘ತನ್ನ ಬೆನ್ನಿನ ಕೊಳಕು ಕಾಣದವನು ಪರರ ಬೆನ್ನಿನ ಧೂಳು ಎಣಿಸಿದನಂತೆ!’ ಸಿ.ಟಿ. ರವಿಯವರೇ, ರಾಜಕೀಯ ವಿರೋಧಿಗಳನ್ನು ಟೀಕಿಸಲು ವಿಚಾರಗಳಿಲ್ಲದಾಗ ಮಹಿಳೆಯ ತಾಯ್ತನವನ್ನು ಎಳೆದುತರುವ ನಿಮ್ಮಂತವರು ಮಹಿಳಾ ಗೌರವದ ಬಗ್ಗೆ ಮಾತಾಡುವುದು ನಾಚಿಕೆಗೇಡು. ಹೆಣ್ಣನ್ನು ದೇವತೆ ಎಂದು ಪೂಜಿಸುವ ಭಾಷಣ ಮಾಡುವುದು, ಅದೇ ಹೆಣ್ಣಿನ ತಾಯ್ತನವನ್ನು ಬೀದಿ ರಾಜಕೀಯದ ವ್ಯಂಗ್ಯಕ್ಕೆ ಬಳಸುವುದು ಇದು ಸಂಸ್ಕೃ ತಿಯಲ್ಲ, ಸಂಘಪರಿವಾರದ ಮಾತುಗಳಲ್ಲೆ ಬಯಲಾಗುತ್ತಿರುವ ವಿಕೃತಿ ಎಂದು ಹರಿಪ್ರಸಾದ್ ಹೇಳಿದ್ದಾರೆ.

“ಬಾಯಲ್ಲಿ ಸಂಸ್ಕೃತಿ, ಮಾತಿನಲ್ಲಿ ವಿಕೃತಿ; ಇದೇ ಸಂಘಪರಿವಾರದ ಅಸಲಿ ಸಂಸ್ಕಾರ!”

ಕೆಲವರಿಗೆ ಅವರ ಮನೆಯಲ್ಲಿ ಮಕ್ಕಳಾದರೂ ಆರ್‌ಎಸ್‌ಎಸ್ ನೆನಪಾಗುತ್ತದೆ ಎಂದು ಹೇಳಿರುವ @CTRavi_BJP , ನಿಮ್ಮ ಮಾತಿನಲ್ಲಿರುವುದು ರಾಜಕೀಯ ವ್ಯಂಗ್ಯವಲ್ಲ, ಹೆಣ್ಣಿನ ಹೆರಿಗೆ ಮತ್ತು ತಾಯ್ತನವನ್ನು ರಾಜಕೀಯ ಕೆಸರೆರಚಾಟಕ್ಕೆ ಎಳೆದುತರುವ ಅತ್ಯಂತ ಹೀನ ಮನಸ್ಥಿತಿ.

ಮಾತೆತ್ತಿದರೆ ಭಾರತೀಯ ಸಂಸ್ಕೃತಿ, ಮಹಿಳೆಯರ ಗೌರವ, ಮಾತೃಶಕ್ತಿ ಎಂದು ಬಿಟ್ಟಿ ಪ್ರವಚನ ಮಾಡುವ ಸಂಘಪರಿವಾರದ ನಾಯಕರ ನಾಲಿಗೆಯಿಂದ ಇಂತಹ ಮಾತುಗಳು ಹೊರಬರುವುದರಲ್ಲಿ ಆಶ್ಚರ್ಯವೇನಿಲ್ಲ. ಹೆಣ್ಣಿನ ತಾಯ್ತನವನ್ನೂ ರಾಜಕೀಯ ಅಪಹಾಸ್ಯದ ಸರಕನ್ನಾಗಿ ಮಾಡಿಕೊಳ್ಳುವಷ್ಟು ನಿಮ್ಮ ಚಿಂತನೆಯೇ ದಿವಾಳಿಯಾಗಿದೆ.

ಸಿ.ಟಿ. ರವಿಯವರೇ, ಮಹಾಮಾನವ @narendramodi ಗೆ ಬೆಳಗಾದರೆ ನೆಹರೂ ನೆನಪಾಗುತ್ತಾರೆ, ಸಂಜೆಯಾದರೆ ರಾಜೀವ್ ಗಾಂಧಿ ನೆನಪಾಗುತ್ತಾರೆ. ದೇಶದಲ್ಲಿ ಮಳೆ ಬಂದರೂ ನೆಹರೂ, ಬರ ಬಂದರೂ ನೆಹರೂ, ಬೆಲೆ ಏರಿದರೂ ನೆಹರೂ, ಆಡಳಿತ ವೈಫಲ್ಯವಾದರೂ ನೆಹರೂ!

ನಿಮ್ಮದೇ ವಿಕೃತ ತರ್ಕವನ್ನು ನಿಮ್ಮ ನಾಯಕರಿಗೆ ಅನ್ವಯಿಸಿದರೆ?

“ತನ್ನ ಬೆನ್ನಿನ ಕೊಳಕು ಕಾಣದವನು ಪರರ ಬೆನ್ನಿನ ಧೂಳು ಎಣಿಸಿದನಂತೆ!”

ಸಿ.ಟಿ. ರವಿಯವರೇ, ರಾಜಕೀಯ ವಿರೋಧಿಗಳನ್ನು ಟೀಕಿಸಲು ವಿಚಾರಗಳಿಲ್ಲದಾಗ ಮಹಿಳೆಯ ತಾಯ್ತನವನ್ನು ಎಳೆದುತರುವ ನಿಮ್ಮಂತವರು ಮಹಿಳಾ ಗೌರವದ ಬಗ್ಗೆ ಮಾತಾಡುವುದು ನಾಚಿಕೆಗೇಡು.

ಹೆಣ್ಣನ್ನು ದೇವತೆ ಎಂದು ಪೂಜಿಸುವ ಭಾಷಣ ಮಾಡುವುದು, ಅದೇ ಹೆಣ್ಣಿನ ತಾಯ್ತನವನ್ನು ಬೀದಿ ರಾಜಕೀಯದ ವ್ಯಂಗ್ಯಕ್ಕೆ ಬಳಸುವುದು ಇದು ಸಂಸ್ಕೃತಿಯಲ್ಲ, ಸಂಘಪರಿವಾರದ ಮಾತುಗಳಲ್ಲೇ ಬಯಲಾಗುತ್ತಿರುವ ವಿಕೃತಿ.

@INCKarnataka

— Hariprasad.B.K. (@HariprasadBK2) November 6, 2026

Tags

BK Hariprasad
share
ವಾರ್ತಾಭಾರತಿ
ವಾರ್ತಾಭಾರತಿ
Next Story
X