Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ಇವತ್ತಿನ ಪತ್ರಕರ್ತರು ವರದಿಯ ಹೆಸರಿನಲ್ಲಿ...

ಇವತ್ತಿನ ಪತ್ರಕರ್ತರು ವರದಿಯ ಹೆಸರಿನಲ್ಲಿ ಕಥೆ ಬರೆಯುತ್ತಿರುವುದು ನಿಜಕ್ಕೂ ಆತಂಕಕಾರಿ : ಬಿ.ಎಂ.ಬಶೀರ್

ವಾರ್ತಾಭಾರತಿವಾರ್ತಾಭಾರತಿ7 Dec 2025 7:58 PM IST
share
ಇವತ್ತಿನ ಪತ್ರಕರ್ತರು ವರದಿಯ ಹೆಸರಿನಲ್ಲಿ ಕಥೆ ಬರೆಯುತ್ತಿರುವುದು ನಿಜಕ್ಕೂ ಆತಂಕಕಾರಿ : ಬಿ.ಎಂ.ಬಶೀರ್
ಬೆಂಗಳೂರು ಸಾಹಿತ್ಯ ಉತ್ಸವ-2025 ‘ಅಗ್ನಿಪಥ’ ಕಾದಂಬರಿಯ ವಿಚಾರ ಗೋಷ್ಠಿ

ಬೆಂಗಳೂರು : ಇವತ್ತಿನ ಬಹುತೇಕ ಪತ್ರಕರ್ತರು ವರದಿಯ ಹೆಸರಿನಲ್ಲಿ ಕಥೆ ಬರೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದು ಹಿರಿಯ ಪತ್ರಕರ್ತ, ಬರಹಗಾರ ಬಿ.ಎಂ.ಬಶೀರ್ ಕಳವಳ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ನಡೆದ ‘ಬೆಂಗಳೂರು ಸಾಹಿತ್ಯ ಉತ್ಸವ-2025ರ ತಮ್ಮ ರಚನೆಯ ‘ಅಗ್ನಿಪಥ’ ಕಾದಂಬರಿಯ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಕರ್ತ ಮತ್ತು ಕಥೆಗಾರ ಜೊತೆಯಾಗಿದ್ದಾಗ ದೊಡ್ಡ ಸಮಸ್ಯೆ ಏನೆಂದರೆ ಕೆಲವೊಮ್ಮೆ ವರದಿ ಬರೆದದ್ದೆಲ್ಲ ಕಥೆಯಾಗುತ್ತದೆ, ಕೆಲವೊಮ್ಮೆ ಕಥೆ ಬರೆಯಲು ಹೋದರೆ ಅದೆಲ್ಲ ವರದಿಯಾಗುತ್ತದೆ. ಇಲ್ಲಿ ನೀವು ಕಥೆ ಬರೆದದ್ದು ವರದಿಯಾದರೆ ಅದರಿಂದ ಯಾರಿಗೂ ಅಪಾಯವಿಲ್ಲ. ಆದರೆ, ವರದಿ ಬರೆದದ್ದು ಕಥೆಯಾದರೆ ಈ ಸಮಾಜಕ್ಕೆ ದೊಡ್ಡ ಅಪಾಯವಿದೆ ಎಂದರು.

ಒಬ್ಬ ಪತ್ರಕರ್ತ ಕಥೆಗಾರನಾದಾಗ ಅಥವಾ ಸೃಜನಶೀಲ ಬರಹಗಳನ್ನು ಬರೆದಾಗ ಅನುಮಾನಪಡುವವರೇ ಹೆಚ್ಚು. ಒಂದು ಕಾದಂಬರಿಯಾಗಲಿ, ಕಥೆಯಾಗಿರಲಿ ಸಮಾಜದ ಎಲ್ಲ ಕ್ಷೇತ್ರದ ಜನರು ಕೂಡ ಅದರಲ್ಲಿ ಪಾಲು ಪಡೆಯಬೇಕು. ರೈತರು, ಕೃಷಿಕರು, ಕಾರ್ಮಿಕರು ಕಾದಂಬರಿ, ಕಥೆಗಳನ್ನು ಬರೆಯಬೇಕು. ಬಹು ಬದುಕುಗಳು ಈ ಮೂಲಕ ನಮ್ಮ ಸಾಹಿತ್ಯದಲ್ಲಿ ಅನಾವರಣಗೊಳ್ಳುತ್ತವೆ, ಸಾಹಿತ್ಯವೂ ಸಮೃದ್ಧವಾಗುತ್ತದೆ ಎಂದು ಬಿ.ಎಂ.ಬಶೀರ್ ಹೇಳಿದರು.

ಒಬ್ಬ ಪತ್ರಕರ್ತ ಸೃಜನಶೀಲ ಬರಹಗಳನ್ನು ಬರೆದರೆ ಆತ, ಕೃಷಿಕರನ್ನು, ಕಾರ್ಮಿಕರನ್ನು, ರೈತರನ್ನು ಸೇರಿದಂತೆ ಎಲ್ಲರನ್ನೂ ಭೇಟಿಯಾಗುವ ಸಂದರ್ಭ ಬರುತ್ತದೆ. ಅವರೆಲ್ಲರೂ ಆತನನ್ನು ಮುಖಾಮುಖಿಯಾಗುತ್ತಾರೆ. ಅವರೆಲ್ಲರನ್ನೂ ಕಥೆಯಾಗಿಸುವ, ಕಾದಂಬರಿಯಾಗಿಸುವ ಅವಕಾಶಗಳು ಪತ್ರಕರ್ತನಿಗಿರುತ್ತವೆ ಎಂದು ಬಿ.ಎಂ.ಬಶೀರ್ ತಿಳಿಸಿದರು.

ಪತ್ರಕರ್ತನೆಂದರೆ ಆತ ಏನನ್ನು ಬೇಕಾದರೂ ಬರೆಯಬಹುದು, ಆತನಿಗೆ ಪೂರ್ಣ ಸ್ವತಂತ್ರವಿದೆ ಎಂಬಂತಹ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿದೆ. ಇದು ತಪ್ಪು ಗ್ರಹಿಕೆ. ಪತ್ರಿಕೆಯ ಒಂಬತ್ತು ಕಾಲಂಗಳ ಮಧ್ಯೆ ಪತ್ರಕರ್ತ ಯಾವತ್ತೂ ಬಂಧಿಯಾಗಿರುತ್ತಾನೆ. ಆತನಿಗೆ ಕಂಡದ್ದನ್ನು, ಕೇಳಿದ್ದನ್ನು ಪೂರ್ಣವಾಗಿ ಬರೆಯುವ ಸ್ವಾತಂತ್ರ್ಯ ಇರುವುದಿಲ್ಲ, ಹಾಗೆ ಬರೆಯಲೂಬಾರದು. ಪತ್ರಿಕೆಯಲ್ಲಿ ಬರೆಯುವಾಗ ಪತ್ರಕರ್ತ ಮೂರನೇ ವ್ಯಕ್ತಿಯಾಗಿಯೇ ಬರೆಯಬೇಕು ಎಂದು ಬಿ.ಎಂ.ಬಶೀರ್ ಹೇಳಿದರು.

‘ಅಗ್ನಿಪಥ’ ಕಾದಂಬರಿಯು ಒಬ್ಬ ಸೈನಿಕನಿಗೆ ಸಂಬಂಧಿಸಿದ ಕಥೆ ಎನ್ನುವುದಕ್ಕಿಂತಲೂ ನಮ್ಮ-ನಿಮ್ಮೆಲ್ಲರ ಬಾಲ್ಯದ ಕಥೆ ಎನ್ನಬಹುದು. ಈ ಕಾದಂಬರಿಯಲ್ಲಿ ನಾನು ಕಳೆದುಕೊಂಡ ನನ್ನ ಬಾಲ್ಯವನ್ನು ಹುಡುಕಿದ್ದೇನೆ. ಅಗ್ನಿಪಥವನ್ನು ಈ ಮೊದಲು ಕಥೆಯ ರೂಪದಲ್ಲಿ ಬರೆದಿದ್ದೆ. ಹೀಗೆ ಬರೆಯುತ್ತಾ ಹೋದಂತೆ ಪಾತ್ರಗಳು ಬೆಳೆಯುತ್ತಾ ಹೋದವು, ನಂತರ ಅದು ಕಾದಂಬರಿಯಾಗಿ ಬೆಳೆಯಿತು. ʼವಾರ್ತಾಭಾರತಿʼ ಪತ್ರಿಕೆಯಲ್ಲಿ ಇದು ಧಾರಾವಾಹಿ ರೂಪದಲ್ಲಿ ಪ್ರಕಟವಾಯಿತು ಎಂದು ಬಿ.ಎಂ.ಬಶೀರ್ ತಿಳಿಸಿದರು.

ಬರೆದವನಿಗಿಂತಲೂ ಓದಿದವನಿಗೆ ನನ್ನ ಬರಹದ ಮೇಲೆ ಯಾರ ಪ್ರಭಾವ ಬೀರಿದೆಯೆಂದು ಗೊತ್ತಾಗುತ್ತದೆ. ಒಂದು ರೀತಿಯಲ್ಲಿ ಹೇಳುವುದಾದರೆ ಪತ್ರಿಕೆಯೇ ನನಗೆ ಪ್ರಭಾವ ಬೀರಿದೆ. ಇಂಥದ್ದೇ ರೀತಿಯಲ್ಲಿ, ಇದೇ ಶೈಲಿಯಲ್ಲಿ ನಿರೂಪಿಸಬೇಕೆಂಬುದನ್ನು ಪತ್ರಿಕಾ ವೃತ್ತಿ ಕಲಿಸಿದೆ. ಅದಕ್ಕಾಗಿ ನಾನು ನನ್ನ ಪತ್ರಿಕಾ ವೃತ್ತಿಗೆ ಕೃತಜ್ಞನಾಗಿದ್ದೇನೆ ಎಂದು ಬಿ.ಎಂ.ಬಶೀರ್ ಹೇಳಿದರು.

ಗೋಷ್ಠಿಯಲ್ಲಿ ಅಂಕಣಕಾರ ರಾಜಾರಾಂ ತಲ್ಲೂರು ಮಾತನಾಡಿ, ಬಿ.ಎಂ.ಬಶೀರ್ ಅವರು ಓರ್ವ ಕವಿಯಾಗಿ ನನಗೆ ಬಹಳ ಇಷ್ಟವಾಗುತ್ತಾರೆ. ಅವರು ಮೂರ್ನಾಲ್ಕು ಸಾಲುಗಳಲ್ಲೇ ಬಹಳಷ್ಟು ವಿಷಯ ಕಟ್ಟಿಕೊಡುತ್ತಾರೆ. ಒಂದು ಕವನ, ಆ ಕವನ ಮೀರಿದ ಚಿತ್ರಣವನ್ನು ಮೂರ್ನಾಲ್ಕು ಸಾಲುಗಳಲ್ಲೇ ಬಶೀರ್ ಕಟ್ಟಿಕೊಡುತ್ತಾರೆ ಎಂದರು.

ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ನಿರೂಪಿಸಿದರು.

“ಸೃಜನಶೀಲನೆ ಎನ್ನುವುದು 9 ಕಾಲಂಗಳಲ್ಲಿ ಬಂಧಿಯಾದ ಪತ್ರಕರ್ತನಿಗೆ ಒಂದು ಸುರಂಗಮಾರ್ಗ!”

ವೃತ್ತಿ ಜೀವನದಲ್ಲಿ ಕೆಲವು ಸಂಗತಿಗಳು ಪತ್ರಕರ್ತನ ಎದೆಯೊಳಗೆ ಮುಳ್ಳಿನಂತೆ ಸಿಕ್ಕಿಕೊಂಡಿರುತ್ತವೆ. ಪತ್ರಕರ್ತನಾದವನು ಒಬ್ಬ ಸೃಜನಶೀಲ ಬರಹಗಾರನಾಗಿದ್ದರೆ ಅವನಿಗೆ ಸೆರೆಮನೆಯಿಂದ ಪಾರಾಗುವ ಒಂದು ಸುರಂಗಮಾರ್ಗ ಸಿಕ್ಕಿದಂತೆ! ಸೃಜನಶೀಲನೆ ಎನ್ನುವುದು ಒಂಬತ್ತು ಕಾಲಂಗಳಲ್ಲಿ ಬಂಧಿಯಾದ ಪತ್ರಕರ್ತನಿಗೆ ಒಂದು ಸುರಂಗಮಾರ್ಗ. ಅವನು ಅದನ್ನು ಎಂದೋ ಒಂದು ದಿನ ಕಥೆಯ ಮೂಲಕವೋ, ಕಾದಂಬರಿಯ ಮೂಲಕವೊ, ಕವನದ ಮೂಲಕವೋ ಹೇಳಲು ಸಾಧ್ಯವಾಗತ್ತದೆ. ‘ಅಗ್ನಿಪಥ’ದಲ್ಲಿ ನಾನು ಸಹ ಅದೇ ಪ್ರಯತ್ನವನ್ನು ಮಾಡಿದ್ದೇನೆ ಎಂದು ಬಿ.ಎಂ.ಬಶೀರ್ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X